ಹುಣಸೂರು ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಗೆ ಬೆಂಬಲ ಸೂಚಿಸಿದ ಕುರುಬ ಸಂಘಟನೆ….

ಮೈಸೂರು,ನ,23,2019(www.justkannada.in):  ಡಿಸೆಂಬರ್ 15 ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ಬಹಳ ಜಿದ್ದಾಜಿದ್ದಿಗೆ ಕಾರಣವಾಗಿರುವ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್. ವಿಶ್ವನಾಥ್‌ಗೆ ಕುರುಬ ಸಂಘಟನೆಗಳು ಬೆಂಬಲ ಸೂಚಿಸಿವೆ.

ಹಾಲುಮತ ಕುರುಬ ಯುವಕರ ಸಂಘಟನೆಗಳು ಇಂದು ಹುಣಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಕುರುಬ ಸಂಘ, ಹಾಲುಮತಸ್ಥರ ಸಂಘ ಅಂತ ಬೋರ್ಡ್ ಹಾಕಿಕೊಳ್ಳಲು ವಿಶ್ವನಾಥ್, ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ ಕಾರಣ. ವಿಶ್ವನಾಥ್ ಗೆದ್ದರೆ ಮಂತ್ರಿ ಆಗುತ್ತಾರೆ. ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯುತ ಮಂತ್ರಿ ಆಗುತ್ತಾರೆ‌. ಆದ್ದರಿಂದ ನಾವು ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕುರುಬ ಸಮಾಜದ ಮುಖಂಡರು ಹೇಳಿದ್ದಾರೆ.

ಈ ಮೂಲಕ ಹುಣಸೂರು ಕ್ಷೇತ್ರದಲ್ಲಿ ಕುರುಬ ಸಂಘಟನೆಗಳು ಸಿದ್ದರಾಮಯ್ಯ ಬದಲು ವಿಶ್ವನಾಥ್ ಬೆನ್ನಿಗೆ ನಿಂತಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಪಿ ಮಂಜುನಾಥ್ ಸ್ಪರ್ಧಿಸಿದ್ದು ಹೆಚ್.ವಿಶ್ವನಾಥ್ ಮತ್ತು ಹೆಚ್.ಪಿ ಮಂಜುನಾಥ್ ನಡುವೆ ಪೈಪೋಟಿ ನಡೆಯಲಿದೆ.

Key words: hunsur- by-election-kuruba-organization -supporting -BJP candidate -H. Vishwanath.