ಕೆ.ಆರ್ ಪೇಟೆ ಬೈ ಎಲೆಕ್ಷನ್: ‘ಜೋಡೆತ್ತು’ ವಿಚಾರ ಪ್ರಸ್ತಾಪಿಸಿ ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್..

ಮಂಡ್ಯ,ನ,23,2019(www.justkannada.in):  ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡ ಹಾಗೂ ವಿಜಯೇಂದ್ರ ಎನ್ನುವ ಎರಡು ಜೋಡೆತ್ತುಗಳನ್ನು ಬಿಟ್ಟಿದ್ದೇವೆ ತಾಕತ್ತು  ಇರುವವರು ಜೋಡೆತ್ತುಗಳನ್ನ ಕಟ್ಟಿ ಹಾಕಲಿ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಸವಾಲು  ಹಾಕಿದರು

ಉಪಚುನಾವಣೆ  ಹಿನ್ನೆಲೆ ಇಂದು ಕೆ.ಆರ್‌ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಪ್ರಚಾರ  ಮಾಡಿದ ನಳೀನ್ ಕುಮಾರ್ ಕಟೀಲ್, ನಾರಾಯಣಗೌಡ ಹಾಗೂ ವಿಜಯೇಂದ್ರ ಎನ್ನುವ ಎರಡು ಜೋಡೆತ್ತುಗಳನ್ನು ಬಿಟ್ಟಿದ್ದೇವೆ, ತಾಕತ್ತು ಇದ್ದವರು ಕಟ್ಟಿ ಹಾಕಿ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಹಾಗೆಯೇ ಹಿಂದಿನ ಹೆಚ್.ಡಿ ಕುಮಾರಸ್ವಾಮಿ ಸರ್ಕಾರ ಬೀಳಲು ಸಿದ್ಧರಾಮಯ್ಯನೇ ಕಾರಣ ಎಂದು ನಳೀನ್ ಕುಮಾರ್ ಕಟೀಲ್ ಆರೋಪಿಸಿದರು.  ಕೆ.ಆರ್ ಪೇಟೆ ಉಪಚುನಾವಣಾ ಕಣ ರಂಗೇರಿದ್ದು ಪ್ರಚಾರದ ಭರಾಟೆ ಜೋರಾಗಿದೆ.

Key words: KR Pete- By Election- BJP President -Nalin Kumar Katil –jodetthu- challenged