ಮಾನವ ಸಂಪನ್ಮೂಲ ಇಲಾಖೆ ಇನ್ಮುಂದೆ ಶಿಕ್ಷಣ ಸಚಿವಾಲಯ: 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಕಡ್ಡಾಯ- ನೂತನ ಶಿಕ್ಷಣ ನೀತಿಗೆ ಅನುಮೋದನೆ…

ನವದೆಹಲಿ, ಜು,29,2020(www.justkannada.in): 34 ವರ್ಷಗಳ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆಯನ್ನ ತರಲಾಗಿದ್ದು, ನೂತನ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.jk-logo-justkannada-logo

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಂಬ ಹೆಸರನ್ನು ಶಿಕ್ಷಣ ಸಚಿವಾಲಯ(Ministry of Education) ಎಂದು ಮರುನಾಮಕರಣ ಮಾಡಲಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನ ಕೈಗೊಳ್ಳಲಾಗಿದೆ.human-resources-department-i-ministry-of-education-adopting-new-education-policy-central-cabinet

ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಎಂಫಿಲ್ ಪದವಿ ರದ್ದು, ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಒಪ್ಪಿಗೆ ನೀಡಲಾಗಿದೆ. ಹಾಗೆಯೇ 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಕಡ್ಡಾಯ ಶಿಕ್ಷಣ ನೀಡುವುದು. ಹಲವು ವೃತ್ತಿಪರ ಕೋರ್ಸ್ ಗಳನ್ನ ವಿಲೀನ ಮಾಡಿ  ಸಮಗ್ರ ಶಿಕ್ಷಣ,  ಬೋರ್ಡ್  ಪರೀಕ್ಷೆಗಳ ಮಹತ್ವ ಕಡಿಮೆ ಮಾಡುವುದು. ವರ್ಷಕ್ಕೆ ಎರಡು ಬಾರಿ ಪರೀಕ್ಷೆಗಳನ್ನ ನಡೆಸುವುದು ಮುಂತಾದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.Human Resources Department I- Ministry of Education-Adopting - New Education- Policy-central cabinet

Key words: Human Resources Department I- Ministry of Education-Adopting – New Education- Policy-central cabinet