ಮನೆ ಕಳ್ಳತನ ಮಾಡಿದ್ಧ ಹೋಮ್ ನರ್ಸಿಂಗ್ ಮಹಿಳೆ ಬಂಧನ.

Promotion

ಮೈಸೂರು,ಜುಲೈ,21,2021(www.justkannada.in): ಮನೆ ಕಳ್ಳತನ ಮಾಡಿದ್ದ ಹೋಮ್ ನರ್ಸಿಂಗ್ ಮಹಿಳೆಯನ್ನ  ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.jk

ಮೀನಾಕ್ಷಿ ಬಂಧಿತ ಆರೋಪಿ. ಹೋಮ್ ನರ್ಸಿಂಗ್ ಕೆಲಸ ಮಾಡುತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇಲೆ ಮೀನಾಕ್ಷಿ ಎಂಬ ಮಹಿಳೆಯನ್ನ ಬಂಧಿಸಲಾಗಿದೆ. 4 ಚಿನ್ನದ ಸರ, 2,50,000 ಮೌಲ್ಯದ 60 ಗ್ರಾಂ ಚಿನ್ನದ ಬಳೆಗಳನ್ನು ಮೀನಾಕ್ಷಿ ಕಳ್ಳತನ ಮಾಡಿದ್ದಳು ಎನ್ನಲಾಗಿದೆ.

ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Home nursing – woman-theft- arrested