ಗೃಹ ಸಚಿವ ಅಮಿತ್ ಶಾ ಏಮ್ಸ್ (AIIMS) ಆಸ್ಪತ್ರೆಗೆ ದಾಖಲು

Promotion

ಬೆಂಗಳೂರು,ಸೆಪ್ಟೆಂಬರ್, 13,2020 : ಗೃಹ ಸಚಿವ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ತಡರಾತ್ರಿ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿದೆ.

jk-logo-justkannada-logo

ಇತ್ತೀಚೆಗಷ್ಟೇ ಕೊವಿಡ್ ನಿಂದ ಗುಣಮುಖರಾಗಿದ್ದರು. ಹೀಗಾಗಿಯೂ, ಉಸಿರಾಡಲು ತೊಂದರೆ ಅನುಭವಿಸುತ್ತಿದ್ದ ಕಾರಣ ಅವರನ್ನು ಶನಿವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಾ.ರಂದೀಪ್ ಗುಲೇರಿಯಾ ಅವರ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾವಹಿಸಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.

Home Minister-Amit Shah-AIIMS-hospitalized

ಆ.18 ರಂದು ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ AIIMS  ದಾಖಲಿಸಲಾಗಿತ್ತು. ಆಗಸ್ಟ್ 14ರಂದು ಕೊರೊನಾ ನೆಗೆಟಿವ್ ಬಂದ ಬಳಿಕ ಡಿಸ್ಟಾರ್ಜ್ ಮಾಡಲಾಗಿತ್ತು.

key words : Home Minister-Amit Shah-AIIMS-hospitalized