ಹಿಂದೂ ಧರ್ಮದ ಸುಧಾರಕ, ಕೇರಳ ರಾಜ್ಯದ ಬಸವಣ್ಣ ಶ್ರೀ ನಾರಯಣ ಗುರು- ಶಾಸಕ ಎಲ್. ನಾಗೇಂದ್ರ.

Promotion

ಮೈಸೂರು,ಆಗಸ್ಟ್,23,2021(www.justkannada.in): ಬ್ರಹ್ಮ ಶ್ರೀ ನಾರಯಣ ಗುರು  ಅವರ 167 ಜನ್ಮ ಜಯಂತಿಯನ್ನು ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ನಾರಯಣ ಗುರು ರಸ್ತೆಯಲ್ಲಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ಆಚರಿಸಿತು.

ನಾರಯಣ ಗುರು ರಸ್ತೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು. ಪುಷ್ಪಾರ್ಚನೆ ಮಾಡಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ, ನಾರಯಣ ಗುರು ರವರು ಒಬ್ಬ ಸಂತರು. ಸರಸ್ವತಿ ನಾಡು ಎನ್ನುವ ಕೇರಳದಲ್ಲಿ ಮೇಲ್ವರ್ಗ ಕೆಳವರ್ಗ ಎಂಬ ಕೆಟ್ಟ ಪಿಡುಗನ್ನು ಹೋಗಲಾಡಿಸಿ ಮಾನವ ನ ಜನ್ಮ ಒಂದೇ ಎಂಬ ಸಂದೇಶವನ್ನು ಸಾರಿದ ಸಂತ. ಹಿಂದುಳಿದ ವರ್ಗದವರನ್ನು ಶೈಕ್ಷಣಿಕವಾಗಿ ಎಲ್ಲ ವರ್ಗದವರೋಂದಿಗೆ ಸಮಾನತೆಯನ್ನು ತಂದವರು, ಹಿಂದು ಧರ್ಮದ ಸುಧಾರಕ, ಕೇರಳ ರಾಜ್ಯದ ಬಸವಣ್ಣ ,ಹಿಂದು ಧರ್ಮದವರು ಅನ್ಯ ಧರ್ಮಕ್ಕೆ ಮತಾಂತರ ಆಗುವುದನ್ನು ತಡೆದ ಮಹಾನ್ ಸಂತ. ಇಂಥ ಮಹಾನ್ ಪುರುಷರ ಹೆಸರಿನಲ್ಲಿ ಈ ರಸ್ತೆಗೆ ಮಹಾನಗರ ಪಾಲಿಕೆ ನಾರಯಣ ಗುರು ಎಂದು ನಾಮಕರಣ ಮಾಡಿರುವುದು ಸಂತೋಷ ಹಾಗೇಯೆ ನಗರ ವ್ಯಾಪ್ತಿಯಲ್ಲಿ ಯಾವುದಾದರೂ ಸ್ಥಳದಲ್ಲಿ ಇವರ ಪುತ್ಥಳಿ ನಿರ್ಮಾಣ ಮಾಡಲು ಯೊಚಿಸಲಾಗುವುದು ಎಂದರು.

ನಂತರ ಮಾತನಾಡಿದ ನಗರ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು, ಮಲಯಾಳಂನ ಭಾಷೆಯಲ್ಲಿ ಬರೆದಿರುವ ಅರಿವಂ ಪುಸ್ತಕ ಈ ಜಗತ್ತಿನಲ್ಲಿ ಸಮಾನತೆಯನ್ನು ಸಾರುತ್ತದೆ. ಅವರ ಹೋರಾಟ ಕೇವಲ ಜಾತಿಯ ಕ್ರೌರ್ಯದ ವಿರುದ್ದವಲ್ಲ ಧಾರ್ಮಿಕತೆಯ ಮೂಲಕ ಮಹಿಳೆಯರ  ಪರವಾಗಿ ಧ್ವನಿ ಮಾಡಿದರು..

ಇವರ ಜನನ 1856 ಆಗಸ್ಟ್ 21 ತಿರುವನಂತಪುರಂದಲ್ಲಿ ಹುಟ್ಟಿ 1928 ರಲ್ಲಿ ದೈವಧೀನರಾದರು.  ಧಾರ್ಮಿಕತೆ ಹಾಗೂ ಅಂಹಿಸೆಯ ಮೂಲಕ ದೊಡ್ಡ ಕ್ರಾಂತಿಯನ್ನೆ ಮಾಡಿದವರು. ಹಾಗೆಯೇ ಸಣ್ಣ ವಯಸ್ಸಿನಲ್ಲೇ ಮದುವೆಯನ್ನು, ಗರ್ಭಿಣಿಯರ ಸೀಮಂತ ಕಾರ್ಯವನ್ನು ನಿಲ್ಲಿಸಿದರು, ಹೆಚ್ಚು ಹೆಚ್ಚು ಹಣ ವ್ಯರ್ಥ ಮಾಡಿ ಹೆಣ್ಣು ಮಕ್ಕಳ ಮದುವೆ ಮಾಡಬಾರದು ಎಂದು ಕೇರಳದಲ್ಲಿ ಸರಳ ಮದುವೆಯನ್ನು ಜಾರಿಗೆ ತಂದರು.

ಅಶ್ಪೃಶ್ಯರಗೆ ಸಮಾನತೆ ಕೊಡಿಸುವ ನಿಟ್ಟಿನಲ್ಲಿ ಅಂದಿನ ಕಾಲದಲ್ಲಿ ದೇವಸ್ಥಾನ ಪ್ರವೇಶ ನಿಷೇಧ ಹಾಗೂ ಬಾವಿಯಲ್ಲಿ ಕುಡಿಯಲು ನೀರು ನಿಷೇದ ವಿದ್ದ ಅನಿಷ್ಟ ಪದ್ದತಿಯನ್ನು ವಿರೋಧಿಸಿ ಕೆಳವರ್ಗದವರಿಗೆ ನ್ಯಾಯ ಕೊಡಿಸುವ ಮೂಲಕ ಯಶಸ್ವಿಯಾದರು. ಒಂದೇ ಮತ ಒಂದೇ ದೇವರು, ಒಂದೇ ಜಾತಿ ಎಂಬ ಸಂದೇಶ ನೀಡಿದ ಮಹಾನ್ ಪುರುಷ, ಇವರು ದಕ್ಷಿಣ ಭಾರತ ಹಾಗೂ ಶ್ರೀಲಂಕಾ ಸೇರಿ ಒಟ್ಟು 79 ದೇವಸ್ಥಾನ ನಿರ್ಮಾಣ ಮಾಡಿದ ಮಹಾನ್ ಪುರುಷ, ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ  ನಗರಪಾಲಿಕೆ ಸದಸ್ಯರಾದ ರವೀಂದ್ರ, ಮಾಜಿ ನಗರ ಪಾಲಿಕೆ ಸದಸ್ಯ ಜಯರಾಮ್, ವಾಣೀಶ್, ಮೈ.ಪು.ರಾಜೇಶ್. ಪ್ರದಾನ ಕಾರ್ಯದರ್ಶಿ ಗೋಪಾಲ್, ಸೋಶಿಯಲ್ ಮೀಡಿಯಾ ಅಭಿಲಾಶ್ ಕೊಟಾಯ್, ಶಿವರಾಜ್,ಸೂರಜ್,ಜಗದೀಶ್, ಪ್ರಸಾದ್ ಜೇಂಕಾರ್,ಪುರುಷೋತ್ತಮ್,ಶೋಬಾ. ವಿಜಯ್,ಶಶಿ,ಷಣ್ಮುಗಂ ಮುಂತಾದವರು ಇದ್ದರು.

Key words: Hindu reformer-kerala-Basavanna- Shri Narayana Guru-MLA -. Nagendra.

.