ಹಿಜಾಬ್, ಕೇಸರಿ ಶಾಲು ವಿವಾದ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಶಾಸಕ ತನ್ವೀರ್ ಸೇಠ್.

Promotion

ಮೈಸೂರು,ಫೆಬ್ರವರಿ,5,2022(www.justkannada.in):   ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್‌ ಸೇಠ್ ಅವರು. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವರಿಗೆ ಪ್ರತ್ಯೇಕ ಪತ್ರ ಬರೆದು ಪರಿಸ್ಥಿತಿ ಕೈ ಮೀರುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಶಾಸಕ ತನ್ವೀರ್ ಸೇಠ್,  ಇಸ್ಲಾಂ ನಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು ಪದ್ದತಿ, ಸಿಖ್ ನಲ್ಲಿ ಪೇಟ ಧರಿಸುವುದು ಪದ್ಧತಿ,‌ ಕ್ರೈಸ್ತರಲ್ಲಿ ಸ್ಕರ್ಟ್ ಧರಿಸುವುದು ಪದ್ಧತಿ ಮತ್ತು ಅನಾದಿ ಕಾಲದ ಸಂಪ್ರದಾಯ. ಇದಕ್ಕೆ ಇಲ್ಲಿಯವರೆಗೂ ಯಾವುದೇ ನಿಷೇಧ ತಡೆಯಾಗಲಿ ನೀಡಿಲ್ಲ. ನಾನು ಶಿಕ್ಷಣ ಸಚಿವನಾಗಿದ್ದಾಗ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಸ್ಕರ್ಟ್ ಮತ್ತು ಶರ್ಟ್ ಸಮವಸ್ತ್ರದ ಬದಲಿಗೆ ಚೂಡಿದಾರ್ ಸಮವಸ್ತ್ರವನ್ನ ಜಾರಿಗೊಳಿಸಿದ್ದೆ ಎಂದರು.No tender -process - drug –purchase- MLA- Tanveer Sait

ಪ್ರತಿಯೊಂದು ಧರ್ಮದಲ್ಲೂ ವಯಸ್ಸಿಗನುಗುಣವಾಗಿ ವಸ್ತ್ರ ಧರಿಸುವುದು ಸಾಮಾನ್ಯ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಸರ್ಕಾರದ ಕರ್ತವ್ಯ. ಉಡುಪಿ ಕಾಲೇಜಿನ ಪ್ರಾಂಶುಪಾಲರ ನಡೆ ಮಕ್ಕಳಲ್ಲಿ ಜಾತಿ ಭೇ಼ದ ಹುಟ್ಟು ಹಾಕುತ್ತಿದೆ. ಇದು ಸಮಾಜಕ್ಕೆ‌ ಮಾರಕ ಆತಂಕಕಾರಿ ಪರಿಸ್ಥಿತಿ ಕೈ ಮೀರುವ ಮುನ್ನ ಸರ್ಕಾರ ಸೂಕ್ತ ನಿರ್ದೇಶನ ನೀಡಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು  ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.

Key words: Hijab- mla-Tanveer Sait-CM Bommai.