ಹೆದ್ದಾರಿ ದರೋಡೆಕೋರರ ಬಂಧನ ಪ್ರಕರಣ: ಪೊಲೀಸ್ ಪೇದೆಯ ಪುತ್ರನ ರಕ್ಷಣೆಗೆ ಮುಂದಾಯ್ತಾ ಪೊಲೀಸ್ ಇಲಾಖೆ..?

ಮಂಡ್ಯ,ಫೆ,15,2020(www.justkannada.in):  ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಅಡ್ಡಹಾಕಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಬಂಧಿತನಾಗಿದ್ದ  ಪೊಲೀಸ್ ಪೇದೆಯ ಪುತ್ರನ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದೆಯಾ ಎಂಬ ಅನುಮಾನ ಮೂಡಿದೆ.

ಹೌದು ಮದ್ದೂರು ಪೊಲೀಸರು ನಾಲ್ವರು ಹೆದ್ದಾರಿ ದರೋಡೆಕೋರರನನ್ನು ಬಂಧಿಸಿ ಎಫ್ ಐಆರ್ ಹಾಕಿದ್ದು,  ಈ ನಡುವೆ ಪೊಲೀಸ್ ಪೇದೆಯ ಪುತ್ರ ಕಾರ್ತಿಕ್ ನನ್ನು  ನಾಪತ್ತೆಯಾಗಿದ್ದಾನೆ ಎಂದು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.  ಇದು ಅನುಮಾನಕ್ಕೆ ಕಾರಣವಾಗಿದೆ . ನಾಪತ್ತೆಯಾಗಿರೋ ಕಾರ್ತಿಕ್ ಮದ್ದೂರು ಗುಪ್ತಚರ ಇಲಾಖೆ ಪೊಲೀಸ್ ಮುಖ್ಯಪೇದೆ ಭುಜಂಗಯ್ಯ ಅವರ ಪುತ್ರನಾಗಿದ್ದಾನೆ.

ಬಂಧಿತರನ್ನು ಮೂರು ದಿನಗಳ ಹಿಂದೆ ವಶಕ್ಕೆ ಪಡೆದ್ರು ವಿಚಾರಣೆ ನೆಪದಲ್ಲಿ FIR ದಾಖಲಿಸಲು ತಡ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗೆಯೇ FIR ನಲ್ಲಿ ಪೊಲೀಸ್ ಪೇದೆ ಭುಜಂಗಯ್ಯ ಪುತ್ರ ಕಾರ್ತಿಕ್ ಹೆಸರು ಮಾತ್ರ ದಾಖಲು ಮಾಡಲಾಗಿದೆ. ಆದರೆ ಆರೋಪಿಯ  ವಯಸ್ಸು ಮತ್ತು‌ ತಂದೆ ಹೆಸರು‌ ದಾಖಲು ಮಾಡಲಾಗಿಲ್ಲ.  ಈ ಮಧ್ಯೆ ಉಳಿದ ಆರೋಪಿಗಳ ಹೆಸರು ವಯಸ್ಸು ವಿಳಾಸ ತಂದೆಯ ಹೆಸರು ನಮೂದಿಸಿ ಎಫ್ ಐ ಆರ್ ಮಾಡಲಾಗಿದ್ದು, ಪೇದೆಯ ಪುತ್ರ ರಕ್ಷಣೆ ಸಲುವಾಗಿ  ಆರೋಪಿ ಕಾರ್ತಿಕ್  ಹೆಸರು ವಿಳಾಸ ವಯಸ್ಸು ನಮೂದಿಸದೆ FIR ಮಾಡಿದ್ದಾರೆಯೇ…? ಈ ಮೂಲಕ ಪೊಲೀಸ್ ಪೇದೆಯ ಮಗನ ಬದಲಿಗೆ ಬೇರೆಬ್ಬ ವ್ಯಕ್ತಿಯನ್ನು ಪ್ರಕರಣಕ್ಕೆ ಸೇರಿಸಲು ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಪೊಲೀಸರು ಆರೋಪಿಗಳ ಮೇಲೆ ಹಾಕಿರೋ ಎಫ್ ಐಆರ್ ಹಲವು ಅನುಮಾನವನ್ನುಂಟು ಮಾಡಿದೆ. ಸಿಕ್ಕಿಬಿದ್ದ ಆರೋಪಿಗಳು ಪ್ರಭಾವಿಗಳಾಗಿರೋ ಕಾರಣಕ್ಕೆ ಸಣ್ಣಪುಟ್ಟ ಕೇಸ್ ದಾಖಲಿಸಿ ರಕ್ಷಣೆಗೆ ನಿಲ್ಲುತ್ತಿದೆಯಾ ಪೊಲೀಸ್ ಇಲಾಖೆ ಎಂಬ ಪ್ರಶ್ನೆಗಳು ಮೂಡಿವೆ.

ಅನುಮಾನಕ್ಕೆ ಕಾರಣವಾಗ್ತಿದೆ ಕೆಲವೊಂದು ಅಂಶಗಳು…

1.ಮೂರು ದಿನಗಳ ಹಿಂದೆ ಕಾರು‌ ಸಮೇತ ೫ ಆರೋಪಿಗಳುನ್ನು ಹಿಡಿದು ಪೊಲೀಸರ ವಶಕ್ಕೆ ನೀಡದ್ದ. ಸ್ಥಳೀಯರು…

2.ವಶಕ್ಕೆ ಪಡೆದ ಕಾರು ನಕಲಿ‌ ನೊಂದಣಿ ಸಂಖ್ಯೆದ್ದಾಗಿದ್ದು ಅಸಲಿ ನೊಂದಣಿ ಸಂಖ್ಯೆಯ ಕಾರೇ ಬೇರೆ ಆಗಿದೆ.

  1. ಆ ದಿನ‌ ಸ್ಥಳೀಯರು ಆರೋಪಿಗಳನ್ನು ಹಿಡಿದು ಕೊಟ್ಟಾಗ ಕಾರಿನಲ್ಲಿ ಗನ್ , ಚಾಕು, ಲಾಂಗ್ ಸೇರಿದಂತೆ ಇನ್ನಿತರ ಮಾರಕಾಸ್ತ್ರ ಇದ್ದ ಬಗ್ಗೆ‌ ಮಾಹಿತಿ….
  2. ಕಾರು ಠಾಣೆಯ ವಶದಲ್ಲಿದ್ದರೂ ಕಾರಿನ‌ ಹಿಂಬಂದಿ ಗ್ಲಾಸ್ ಒಡೆದಿದ್ದು ಯಾರು ಯಾಕೆ?…

5.ಬಂಧಿತರನ್ನು ಮೂರು ದಿನಗಳ ಹಿಂದೆ ವಶಕ್ಕೆ ಪಡೆದ್ರು ವಿಚಾರಣೆ ನೆಪದಲ್ಲಿ FIR ದಾಖಲಿಸಲು ತಡ ಮಾಡಿದ್ದು ಯಾಕೆ?..

6.ಐವರನ್ನು ಕರೆ ತಂದ್ರು‌ ಪೊಲೀಸ್  ಗುಪ್ತಚರ ಇಲಾಖೆಯ ಪೇದೆಯ ಮಗನನ್ನು ನಾಪತ್ತೆ ಎಂದು ತೋರಿಸಿದ್ದು ಏಕೆ?…

7.ಆ ದಿನವೇ ಕಾರ್ತಿಕ್  ಓಡಿ ಹೋದ ಎಂದು ತೋರಿಸಿ ಆತನ ರಕ್ಷಣೆಗೆ ಮಾಡಿದ ಪ್ಲ್ಯಾನಾ…?….

8.ಬಂಧಿತರ ಚಲನವಲನ‌ ನೋಡಿದ್ರೆ ವೃತ್ತಿಪರ ದರೋಡೆಕೋರರಂತೆ ಕಂಡು‌ ಬಂದ್ರು ಕೇವಲ  ದರೋಡೆ ಯತ್ನ‌ ಪ್ರಕರಣವಷ್ಟೆ ದಾಖಲಿಸಿದ್ದು ಏಕೆ? ಎಂಬ ಪ್ರಶ್ನೆಗಳನ್ನ ಹುಟ್ಟುಹಾಕಿವೆ.

Key words: Highway -robbery –arrest- case- Police Department – protection -police son.