ನಾಲ್ವಡಿ ಕೃಷ್ಣರಾಜ ಒಡೆಯರ್  ರಿಂದ ನಿರೀಕ್ಷೆಗೂ ಮೀರಿದ ಸಾಧನೆ: ಆದ್ರೆ ಅವರ ಜಯಂತಿ ಅದ್ದೂರಿಯಾಗಿ ಆಚರಿಸಲು ಯಾರೂ ಮುಂದೆ ಬರಲ್ಲ- ಸಂಸದ ಪ್ರತಾಪ್ ಸಿಂಹ….

ಮೈಸೂರು,ಫೆ,15,2020(www.justkannada.in): ಅಂದಿನ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಹಲವು ಪ್ರಥಮಗಳಿಗೆ ಮೈಸೂರಿನ ಅಂದಿನ ಆಳರಸರು ಕಾರಣೀಭೂತರಾಗಿದ್ದಾರೆ. ಆದರೆ ಅವರ ಜಯಂತಿಯನ್ನು ಯಾರೂ ಅದ್ದೂರಿಯಾಗಿ ಮಾಡಲು ಮುಂದೆ ಬರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರು.

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಹಲವು ಪ್ರಥಮಗಳಿಗೆ ಮೈಸೂರಿನ ಅಂದಿನ ಆಳರಸರು ಕಾರಣೀಭೂತರಾಗಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನ, ಕೈಗಾರಿಕಾಭಿವೃದ್ದಿ, ಮೀಸಲಾತಿ ಅನುಷ್ಠಾನ ಸೇರಿದಂತೆ ಹಲವು ಪ್ರಥಮಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ. ಮೈಸೂರಿನ ಆಳರಸ ಜಯಚಾಮರಾಜೇಂದ್ರ ಒಡೆಯರ್ ಎಂಟು ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಇತ್ತೀಚಿನ ವ್ಯವಸ್ಥೆಯಲ್ಲಿ ಒಬ್ಬ ಮುಖ್ಯಮಂತ್ರಿಗೆ 15 ವರ್ಷ ಕಾಲವಕಾಶ ಕೊಟ್ಟರೂ ಮಾಡಲು ಸಾಧ್ಯವಿಲ್ಲ ಎಂದು ನುಡಿದರು.

ಅಂದಿನ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಆದರೆ ಅವರ ಜಯಂತಿಯನ್ನು ಯಾರೂ ಅದ್ದೂರಿಯಾಗಿ ಮಾಡಲು ಮುಂದೆ ಬರುವುದಿಲ್ಲ. ಕೇವಲ ಓಟ್ ಬ್ಯಾಂಕ್ ಗಾಗಿ ಹೈದರಾಲಿ, ಟಿಪ್ಟು ಜಯಂತಿಗಳನ್ನು ಮಾಡಲು ಉತ್ಸುಕತೆ ತೋರುತ್ತಾರೆಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ಕುಟುಕಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರಿನ ಆಳರಸರ ಆದರ್ಶಗಳನ್ನು ನಾವು ಮುಂದುವರಿಸಿಕೊಂಡುಹೋಗಬೇಕಿದೆ. ಜಯಚಾಮಜೇಂದ್ರ ಒಡೆಯರ್ ಕಾಲದಲ್ಲಿ ಮೈಸೂರು ಅರಮನೆ ಹಾಗೂ ಸುತ್ತೂರು ಮಠದ ನಡುವೆ ಅವಿನಾಭಾವ ಸಂಬಂಧ ಆರಂಭವಾಯಿತು. ಕಾಲ ಯಾವ ರೀತಿ ಬದಲಾದರೂ ನಮ್ಮ ಪೂರ್ವಜರ ಆದರ್ಶಗಳನ್ನು ಅನುಸರಿಸಿಕೊಂಡು ಹೋಗಬೇಕು ಎಂದರು.

Key words: Nalwadi Krishnaraja Wodeyar- No one -celebrate –Jayanti-MP Pratap simha