ನಗರಸಭೆ, ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಅಧಿಸೂಚನೆ ರದ್ಧುಪಡಿಸಿ ಹೈಕೋರ್ಟ್ ಆದೇಶ…

ಬೆಂಗಳೂರು,ನವೆಂಬರ್,19,2020(www.justkannada.in):  ಇತ್ತೀಚಿಗಷ್ಟೇ ರಾಜ್ಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆಗೆ ಸರ್ಕಾರ ಹೊರಡಿಸಿದ್ದ  ಮೀಸಲಾತಿಯ ಅಧಿಸೂಚನೆಯನ್ನ ಹೈಕೋರ್ಟ್ ರದ್ದುಪಡಿಸಿದೆ.kannada-journalist-media-fourth-estate-under-loss

ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಮೀಸಲಾತಿ ನಿಗದಿ ಪಡಿಸಿ, ಅಧಿಸೂಚನೆ ಹೊರಡಿಸಿದ್ದ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಮೂರ್ತಿ ಆರ್ ದೇವದಾಸ್ ಏಕ ಸದಸ್ಯಪೀಠ ಮೀಸಲಾತಿ ಅಧಿಸೂಚನೆಯನ್ನ ರದ್ದುಪಡಿಸಿ ಆದೇಶ ಹೊರಡಿಸಿದೆ.High Court- order- quashing - reservation -notification - post - Municipality

ಇತ್ತೀಚೆಗೆ ರಾಜ್ಯ ಸರ್ಕಾರವು ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿಯ ಅಧಿಸೂಚನೆ ಹೊರಡಿಸಿತ್ತು.  ಇನ್ನೂ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ  ರದ್ದು ಪಡಿಸಿರುವ ಹೈಕೋರ್ಟ್ ಏಕಸದಸ್ಯಪೀಠ , ನಾಲ್ಕು ವಾರಗಳಲ್ಲಿಯೇ ನೂತನ ಮೀಸಲಾತಿ ಪಟ್ಟಿಯನ್ನು ಮತ್ತೆ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಮೀಸಲಾತಿ ಪಟ್ಟಿ ರದ್ಧು ಹಿನ್ನೆಲೆ ಇತ್ತೀಚೆಗೆ ಅನೇಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆಗೊಂಡವರಿಗೆ ಬಿಗ್ ಶಾಕ್ ಆಗಿದೆ.

Key words: High Court- order- quashing – reservation -notification – post – Municipality