ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ: ಮೈಸೂರು ಮೃಗಾಲಯದಲ್ಲಿ ಬಾಂಬ್ ನಿಷ್ಕ್ರಿಯದಳದಿಂದ ಪರಿಶೀಲನೆ…

kannada t-shirts

ಮೈಸೂರು,ಆ,17,2019(www.justkannada.in) ಉಗ್ರರು ನುಸುಳಿರುವ ಶಂಕೆ ವ್ಯಕ್ತವಾಗಿದ್ದು ಈ ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ನಡುವೆ ಪ್ರವಾಸಿ ತಾಣದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಮೈಸೂರು ಮೃಗಾಲಯದಲ್ಲಿ ಬಾಂಬ್ ನಿಷ್ಕ್ರಿಯದಳ ಪರಿಶೀಲನೆ ನಡೆಸಿದೆ.

ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಬಾಂಬ್ ನಿಷ್ಕ್ರಿಯದಳ ಪರಿಶೀಲನೆ ನಡೆಸಿದೆ. ಮೃಗಾಲಯಕ್ಕೆ  ಬರುವ ಪ್ರವಾಸಿಗರ ಮೇಲೆ ಕಟ್ಟೆಚ್ಚರ ವಹಿಸಲಾಗದ್ದು, ತಪಾಸಣೆ ಬಳಿಕ ಪ್ರವೇಶ ಕಲ್ಪಿಸಿಲಾಗಿದೆ. ದೇಶ ವಿದೇಶದಿಂದ ಹೆಚ್ಚಾಗಿ ಬರುವ ಮೈಸೂರು ಮೃಗಾಲಯಕ್ಕೆ ಮೊದಲಿಗಿಂತಲೂ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.

ಈ  ಬಗ್ಗೆ ಮಾಹಿತಿ ನೀಡಿರುವ  ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ,  ಮೃಗಾಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೂ ತರಬೇತಿ ನೀಡಲಾಗಿದೆ.  ಉಗ್ರರು ಯಾವುದೇ ದುಷ್ಕೃತ್ಯ ನಡೆಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಅನುಮಾನಸ್ಪದ ವ್ಯಕ್ತಿಗಳು  ಕಂಡು ಬಂದಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ನಮ್ಮ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.  ಸ್ಥಳೀಯರು ಹಾಗೂ ಪ್ರವಾಸಿಗರು ಅನುಮಾನಗಳಿದ್ದರೆ ಪೋಲಿಸರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.

Key words: High Alert -Declaration – Inspection -Bomb Disposal Team – Mysore Zoo

 

website developers in mysore