ಹೆಚ್.ಡಿಕೆ ಎಂದಾದರೂ ಸತ್ಯ ಹೇಳಿದ್ದಾರಾ..? ಪುತ್ರನ ವಿರುದ್ಧ ಆರೋಪಕ್ಕೆ ಸಿಎಂ ಸಿದ್ಧರಾಮಯ್ಯ ಕಿಡಿ.

Promotion

ಮೈಸೂರು,ನವೆಂಬರ್,17,2023(www.justkannada.in):   ಮಾಜಿ ಶಾಸಕ ಯತೀಂದ್ರ ಸಿದ್ಧರಾಮಯ್ಯ ಅವರು ಮಾತನಾಡಿದ್ದ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ನನಗೆ ರಾಜಕೀಯ ದ್ವೇಷ ಗೊತ್ತಿಲ್ಲ. ಕುಮಾರಸ್ವಾಮಿ ಎಂದಾದರೂ ಸತ್ಯ ಹೇಳಿದ್ದಾರಾ.  ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ . ಹೊಟ್ಟೆಕಿಚ್ಚಿನಿಂದ ಹೇಳಿಕೆ ನೀಡಿದ್ದಾರೆ. ಹೆಚ್. ಡಿಕೆಗೆ ಸುಳ್ಳು ಹೇಳುವುದು ಬಿಟ್ಟು ಬೇರೆನೂ ಬರಲ್ಲ. ಅವರದ್ದು ಹಿಟ್ ಅಂಡ್ ರನ್ ಕೇಸ್ ಎಂದು ವಾಗ್ದಾಳಿ ನಡೆಸಿದರು.

ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ.  ಅವನು ಮಾಜಿ ಶಾಸಕ ಅಲ್ವಾ. ಅಶ್ರಯ ಸಮಿತಿ ಅಧ್ಯಕ್ಷ.  ನನ್ನ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ನನ್ನ ಮಗನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹರಿಹಾಯ್ದರು.

Key words:  HDK – truth-CM- Siddaramaiah – accusations- yathindra siddaramaiah