ಸೀರೆ ವಿಚಾರಕ್ಕೆ ವಧು ಮತ್ತು ವರನ ಕುಟುಂಬದ ನಡುವೆ ಜಗಳ: ಮುರಿದು ಬಿದ್ದ ಮದುವೆ..

Promotion

ಹಾಸನ,ಫೆ,6,2020(www.justkannada.in): ವಧುವಿನ ಸೀರೆಯ ವಿಚಾರಕ್ಕೆ  ವಧು ಮತ್ತು ವರನ ಕುಟುಂಬದ ನಡುವೆ ಜಗಳವಾಗಿ ಮದುವೆ ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನದ ಬಿದರೆಕೆರೆಯಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 5 ರಂದು ರಘುಕುಮಾರ್ ಮತ್ತು ಸಂಗೀತ ಎಂಬುವವರ ನಡುವೆ ವಿವಾಹ ನಿಗದಿಯಾಗಿತ್ತು. ಆದರೆ ವಧುವಿನ  ಸೀರೆಯ ಬಾರ್ಡರ್ ಸರಿಯಿಲ್ಲ ಎಂದು ವಧುವಿನ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ವರ ಮತ್ತು ವಧುವಿನ ಕುಟುಂಬದ ನಡುವೆ ಜಗಳ ನಡೆದು ಮದುವೆ ಮುರಿದು ಬಿದ್ದಿದೆ ಎನ್ನಲಾಗಿದೆ. ಇನ್ನು ಜಗಳ ಆದ ಬೆನ್ನಲ್ಲೆ ವರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

 ಚಾಮರಾಜನಗರದಲ್ಲಿ ಮದುವೆಗೂ ಮುನ್ನ ವಧು ಎಸ್ಕೇಪ್..

ಇನ್ನೊಂದೆಡೆ ಚಾಮರಾಜನಗರ ತೆರಕಣಾಂಬಿಯಲ್ಲಿ ಮದುವೆಗೂ ಮುನ್ನ ವಧು ಪರಾರಿಯಾದ ಘಟನೆ ನಡೆದಿದೆ. ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 5 ರಂದು ಶ್ರೀನಿವಾಸ್ ಜತೆ ಜ್ಯೋತಿಗೆ ಮದುವೆ ಫಿಕ್ಸ್ ಆಗಿತ್ತು. ಮಂಗಳವಾರ ಸಂಜೆ ವರನ ಕಡೆಯುವರು ಮದುವೆ ಮಂಟಪಕ್ಕೆ ಆಗಮಿಸಿದ್ದರು. ಆದರೆ ಮದುವೆಗೂ ಮುನ್ನವೇ ಮಂಗಳವಾರ ರಾತ್ರಿ ಪ್ರಿಯಕರನ ಜತೆ ವಧು ಪರಾರಿಯಾಗಿದ್ದಾಳೆ ಎನ್ನಲಾಗಿದೆ.

Key words: Hassan-marrige- broken-  Sareei issue.