ಆಸ್ಕರ್‌ ವಿಜೇತರಿಗೆ ಈ ಬಾರಿ ಸಿಗಲಿದೆ ದುಬಾರಿ ಗಿಫ್ಟ್ !

kannada t-shirts

ಬೆಂಗಳೂರು, ಫೆಬ್ರವರಿ 07, 2020 (www.justkannada.in): ಫೆಬ್ರವರಿ 9ರಂದು ಕೊಡಮಾಡಲಾಗುವ ಆಸ್ಕರ್‌ ಪ್ರಶಸ್ತಿಗಳೊಂದಿಗೆ, ಎಲ್ಲಾ 24 ನಾಮಿನಿಗಳಿಗೆ ಗಿಫ್ಟ್‌ ಬ್ಯಾಗ್‌ ಗಳನ್ನು ಉಡುಗೊರೆ ನೀಡಲು ಡಿಸ್ಟಿಂಕ್ಟಿವ್‌ ಅಸೆಟ್ಸ್‌ ಸಂಸ್ಥೆ ತೀರ್ಮಾನ ಮಾಡಿದೆ.

ಬೆಸ್ಟ್ ನಟ, ಬೆಸ್ಟ್‌ ನಟಿ, ಬೆಸ್ಟ್ ಸಪೋರ್ಟಿಂಗ್ ನಟ, ಬೆಸ್ಟ್ ಸಪೋರ್ಟಿಂಗ್ ನಟಿ ಹಾಗೂ ಬೆಸ್ಟ್ ನಿರ್ದೇಶಕರ ಕೆಟಗರಿಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು.

ಈ ಉಡುಗೊರೆಗಳ ಮೌಲ್ಯವು $215,000 (1.5 ಕೋಟಿ ರೂ.ಗಳು) ಆಗಿದ್ದು, ಕಾರ್ಯಕ್ರಮದ ವೇಳೆ ನೀಡಲಾಗುವುದು. ಈ ಉಡುಗೊರೆಗಳ ಪೈಕಿ, ಸಿನಿಕ್ ಎಸ್ಕೇಪ್‌ ಲಕ್ಸೂರಿ ಹಾಯಿ ದೋಣಿಯಲ್ಲಿ 12 ದಿನಗಳ ಕ್ರೂಸ್‌ ಅನ್ನು ಸ್ಪೇನ್‌ನ ಫಾರೋ ಕಂಪ್ಲಿಡಾ ಲೈಟ್‌ ಹೌಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

website developers in mysore