ಜಿಮ್, ಬಾಕ್ಸಿಂಗ್ ನಿಂದ ಸುಸ್ತಾಗಿರಬಹುದೆಂದು ಭಾವಿಸಿದ್ದೇ ಅಪ್ಪು ಜೀವಕ್ಕೆ ಎರವಾಯಿತೇ?

Promotion

ಬೆಂಗಳೂರು, ಅಕ್ಟೋಬರ್ 30, 2021 (www.justkannada.in): ಪವರ್ ಸ್ಟಾರ್ ಅಂತಿಮ ಕ್ಷಣಗಳ ಕುರಿತು ವೈದ್ಯ ರಮಣ್ ರಾವ್ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದ ಪುನೀತ್,ಸ್ವಲ್ಪ ಸುಸ್ತಾಗ್ತಿದೆ ಎಂದಿದ್ದರಂತೆ. ಎದೆ ನೋವು ಸೇರಿದಂತೆ ಯಾವುದೇ ಸಮಸ್ಯೆ ಅವರಲ್ಲಿ ಕಾಣಿಸಿರಲಿಲ್ಲ ಎಂದು ರಮಣ್ ರಾವ್ ಮಾಹಿತಿ ನೀಡಿದ್ದಾರೆ.

ಜಿಮ್ ಹಾಗೂ ಬಾಕ್ಸಿಂಗ್ ನಿಂದ ಸುಸ್ತಾಗಿರಬಹುದು ಎಂದು ಪುನೀತ್ ಭಾವಿಸಿದ್ದರು. ಪತ್ನಿ ಜೊತೆ ಬಂದಿದ್ದ ಪುನೀತ್ ಗೆ ತಕ್ಷಣ ವೈದ್ಯರು ಇಸಿಜಿ ಮಾಡಿದ್ದರು.

ಬಳಿಕ ವಿಕ್ರಂ ಆಸ್ಪತ್ರೆಗೆ ದಾಖಲಾಗುವಂತೆ ಮಾಹಿತಿ ನೀಡಿದ್ದರಂತೆ. ವಿಕ್ರಂ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಕೂಡ ಮಾಡಲಾಗಿತ್ತು. ಅಷ್ಟರೊಳಗೆ ಅಪ್ಪು ಹೃದಯ ಬಡಿತ ನಿಂತಿತ್ತು ಎಂದು ರಮಣ್ ರಾವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.