ನಟ ಪುನೀತ್ ರಾಜ್ ಕುಮಾರ್ ಗೆ ಅಂತಿಮ ನಮನ ಸಲ್ಲಿಸಿದ ರಾಜ್ಯಪಾಲ ಟಿ.ಸಿ ಗೆಹ್ಲೋಟ್, ಸಿಎಂ ಬೊಮ್ಮಾಯಿ.

ಬೆಂಗಳೂರು,ಅಕ್ಟೋಬರ್,30,2021(www.justkannada.in):  ಹೃದಯಾಘಾತದಿಂದ ನಿಧನರಾದ  ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಗಣ್ಯಾತೀಗಣ್ಯರ ದಂಡೇ ಆಗಮಿಸುತ್ತಿದ್ದು, ಜನಸಾಗರವೇ ಕಂಠೀರವ ಸ್ಟೇಡಿಯಂ ಹತ್ತಿರ ಲಗ್ಗಿ ಇಡುತ್ತಿದೆ.

ಈ ಮಧ್ಯೆ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಸಹ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಸಿಎಂ  ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು.

ಹಾಗೆಯೇ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು, ಶಾಸಕ ರಾಜೂಗೌಡ ಸೇರಿದಂತೆ ಗಣ್ಯಾತೀಗಣ್ಯರು ಕಂಠೀರವ ಸ್ಟೇಡಿಯಂ ಬಳಿ ಆಗಮಿಸಿ ನಟ ಪವರ್ ಸ್ಟಾರ್ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

Key words: Governor -TC Gehlot- CM Bommai –final- actor- Punith Raj Kumar.

ENGLISH SUMMARY….

Governor T.C. Gehlot, CM Bommai pay homage to ‘APPU’
Bengaluru, October 30, 2021 (www.justkannada.in): Governor of Karnataka Thawar Chand Gehlot and Chief Minister Basavaraj Bommai paid homage to the Powerstar of Sandalwood Puneeth Rajkumar, who passed away due to cardiac arrest yesterday.
A fleet of dignitaries from Karnataka and neighboring states are arriving at Bengaluru to pay obeisance to the late actor. Home Minister Araga Jnanendra also paid his homage.
Other dignitaries who paid their last respects include Speaker Vishveshwara Hegde Kageri, Siddaganga Math Seer Siddalinga Swamiji, MLA Rajugowda, etc.
Keywords: Puneeth Rajkumar/ obeisance/ homage/ last respect/ Governor/ Chief Minister