ಗ್ರಾಮ ಪಂಚಾಯಿತ್ ಚುನಾವಣೆಗೆ ಮುಹೂರ್ತ ಫಿಕ್ಸ್: ಎರಡು ಹಂತದಲ್ಲಿ ಮತದಾನ..

Promotion

ಬೆಂಗಳೂರು,ನವೆಂಬರ್,30,2020(www.justkannada.in): ತೀವ್ರ ಕೂತುಹಲ ಕೆರಳಿಸಿದ್ದ ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತ್ ಚುಣಾವಣೆ ನಡೆಯಲಿದೆ.

ಡಿಸೆಂಬರ್ 22 ಮತ್ತು 27 ರಂದು ಗ್ರಾಮ ಪಂಚಾಯಿತಿ ಚುನಾವಣೆ  ನಡೆಯಲಿದ್ದು ಡಿಸೆಂಬರ್ 30 ರಂದು ಫಲಿತಾಂಶ ಹೊರ ಬೀಳಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಈ ಕುರಿತು ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು,  ರಾಜ್ಯದ ಒಟ್ಟು 5,762 ಗ್ರಾಮಪಂಚಾಯಿತಿಗಳಿಗೆ ಡಿಸೆಂಬರ್ 22 ಮತ್ತು 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದೆ.Gram Panchayat Elections- date-fix-Voting - two levels.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಡಿಸೆಂಬರ್ 7ರಿಂದ ಆರಂಭವಾಗಲಿದ್ದು ಡಿಸೆಂಬರ್ 11ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಡಿಸೆಂಬರ್ 14 ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನಾಂಕವಾಗಿದೆ.  ಗ್ರಾಮಪಂಚಾಯಿತಿ ಚುನಾವಣೆ ವೇಳೆ  ಕೋವಿಡ್-19 ನಿಯಮ ಕಡ್ಡಾಯ ಮಾಡಲಾಗಿದ್ದು,  ಬೀದರ್ ನಲ್ಲಿ ಮಾತ್ರ ಚುನಾವಣೆಗೆ ಇವಿಎಂ ಬಳಸಲು ನಿರ್ಧರಿಸಲಾಗಿದೆ.

English summary….

GP Elections to be held in two phases on Dec.22 and 27
Bengaluru, Nov. 30, 2020 (www.justkannada.in): The State Election Commission has announced that the Gram Panchayat elections in Karnataka will be held in two phases on December 22 and 27 and the results will be announced on December 30.Gram Panchayat Elections- date-fix-Voting - two levels.
The State Election Commission has informed that the elections for 5,762 GPs in the State will be held on Dec. 22 and 27 and voting will be held from 7.00 am to 5.00 pm.
Keywords: Election Commission/ GP elections on December 22 and27/

Key words: Gram Panchayat Elections- date-fix-Voting – two levels.