ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆಗೆ ಆಗ್ರಹಿಸಿದ ಹಿನ್ನೆಲೆ – ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟ ಬಿ.ವೈ ವಿಜಯೇಂದ್ರ..

ಮೈಸೂರು,ನವೆಂಬರ್,30,2020(www.justkannada.in):  ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣವನ್ನು ತನಿಖೆಗೆ ಆಗ್ರಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಟಾಂಗ್ ನೀಡಿದ್ದಾರೆ.logo-justkannada-mysore

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಬಿವೈ ವಿಜಯೇಂದ್ರ,  ಡಿ.ಕೆ ಶಿವಕುಮಾರ್ ಸೋಲಿನ ಹತಾಶೆಯಿಂದ ಮಾತನಾಡುತ್ತಿದ್ದಾರೆ.  ಶಿರಾ ಮತ್ತು ಆರ್.ಆರ್ ನಗರ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಹತಾಶೆಯಿಂದ ಈ ರೀತಿ ಆರೋಪ ಮಾಡಿದ್ದಾರೆ. ಸಂತೋಷ್ ವಿಚಾರವನ್ನ ರಾಜಕೀಯಕ್ಕೆ ತರುತ್ತಿದ್ದಾರೆ. ಈಗಾಗಲೇ ಸಿಎಂ ಬಿಎಸ್ ವೈ ಸಂತೋಷ್ ರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಆದ್ರೆ ಈ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ರಾಜಕೀಯ ಹುಡುಕುತ್ತಿದ್ದಾರೆ ಎಂದು ತಿರುಗೇಟು ನೀಡಿದರು.mysore-BY Vijayendra - Tang -DK Sivakumar -  Santosh'-suicide case.

ಸಿಎಂ ಬದಲಾವಣೆ ಇಲ್ಲ..

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಮುಂದಿನ ಎರಡುವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಹೀಗಾಗಿ ಬದಲಾವಣೆ ಇಲ್ಲ ಎಂದರು.

English summary…

D.K. Shivakumar has become desperate: B.Y. Vijendra
Mysuru, Nov. 30, 2020 (www.justkannada.in): Reacting over KPCC President D.K. Shivakumar’s demand for an investigation by a high-level authority over the incident of suicide attempt by CM’s PA Santhosh, B.Y. Vijendra today said that the Congress leader has become desperate over the failure of his party in the recently held Sira and R.R. Nagar Assembly elections. “Due to the frustration, he is trying to politicize Santhosh’s issue. The Chief Minister has visited Santhosh and enquired about his health,” he explained.mysore-BY Vijayendra - Tang -DK Sivakumar -  Santosh'-suicide case.
In his reply to a question on change in the leadership in the State, Vijendra explained that the BJP State President Sri Nalin Kumar Kateel has already informed that there will be no change in the leadership in the state and B.S. Yedyurappa will continue to be the Chief Minister for the remaining term.
Keywords: D.K. Shivakumar/ B. Y. Vijendra/ No change in CM/ leadership

Key words: mysore-BY Vijayendra – Tang -DK Sivakumar –  Santosh’-suicide case.