ಮೈಸೂರು ದಸರಾಗೆ ಸರ್ಕಾರದಿಂದ ಗೈಡ್ ಲೈನ್: ಜಂಬೂ ಸವಾರಿಗೆ ಕೇವಲ 500 ಜನರಿಗೆ ಮಾತ್ರ ಅವಕಾಶ.

ಮೈಸೂರು,ಅಕ್ಟೋಬರ್,5,2021(www.justkannada.in): ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸರ್ಕಾರ ಕೋವಿಡ್ ನಿಯಮಾವಳಿ ಬಿಡುಗಡೆ ಮಾಡಿದ್ದು, ಅದರಂತೆ ಜಂಬೂ ಸವಾರಿಗೆ ಕೇವಲ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಸರ್ಕಾರ ಮೈಸೂರು ದಸರಾಗೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜೆಗೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೀಪಾಲಂಕಾರಕ್ಕೆ 500 ಜನರ ಮಿತಿ ನಿಗದಿ ಮಾಡಲಾಗಿದೆ.

ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವವರಿಗೆ  ಒಂದು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದ್ದು  ಆರ್ ಟಿಪಿಸಿಆರ್ ನೆಗಿಟಿವ್ ವರದಿ  ಹಾಗೂ ಕೋವಿಡ್ ಲಸಿಕೆ ಪಡೆದಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು  ಸರ್ಕಾರ ತಿಳಿಸಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಮೈಸೂರು ಮತ್ತು ಇತರೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

Key words: Government- GuideLine – Mysore Dasara-Jumbo  savari- only -500 people.

ENGLISH SUMMARY…

Govt. guidelines for Mysuru Dasara: Only 500 people will be allowed to watch Jamboo Savari
Mysuru, October 5, 2021 (www.justkannada.in): The Government of Karnataka has issued guidelines for the Mysuru Dasara Mahotsav celebrations. Accordingly, only 500 persons will be allowed for this year’s Jamboo Savari, that will take place inside the Ambavilasa Palace premises.
Only 100 persons will be allowed or the pooja atop the Chamundi hills and 500 people will be allowed to participate in the Dasara cultural programs. All those who take part in the Dasara Mahotsav should compulsorily have one dose of COVID vaccination and should possess RTPCR negative and COVID vaccination certificates. The government has decided to give opportunity for local cultural groups to perform in the cultural program.
Keywords: Mysuru Dasara/ Jamboo Savari/ govt. guidelines/ 500 people