ಐಸಿಸಿ ಟಿ-20 ವಿಶ್ವಕಪ್: ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್ !

ಬೆಂಗಳೂರು, ಅಕ್ಟೋಬರ್ 05, 2021 (www.justkannada.in): ಅಕ್ಟೋಬರ್ 17 ರಿಂದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ.

ಅಕ್ಟೋಬರ್​ 24 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ​ ಮುಖಾಮುಖಿಯಾಗಲಿವೆ.

ಈ ಪಂದ್ಯದ ಟಿಕೆಟ್ ಮಾರಾಟ ಆರಂಭಿಸಿದ ಕೇವಲ 1 ಗಂಟೆಯ ಒಳಗಾಗಿ ಎಲ್ಲವೂ ಸೋಲ್ಡ್​ ಔಟ್ ಆಗಿವೆ.
ಪ್ಲಾಟಿನಮ್​ಲಿಸ್ಟ್ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ ಪ್ರಾರಂಭ ಮಾಡಲಾಯಿತು. ಒಂದೇ ಗಂಟೆಯಲ್ಲಿ ಟಿಕೆಟ್​ಗಳೆಲ್ಲವೂ ಸೋಲ್ಡ್ ಔಟ್ ಆಗಿವೆ.

ಜನರಲ್, ಜನರಲ್ ಈಸ್ಟ್, ಪ್ರಿಮಿಯಮ್, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಂ ಟಿಕೆಟ್​ಗಳು ಸಂಪೂರ್ಣ ಮಾರಾಟವಾಗಿವೆ.

ICC T-20 World Cup: India-Pakistan match ticket sold out in one hour!