ಶರಣ ಶರಣೆಯರ ಸ್ಥಳಗಳ ಅಭಿವೃದ್ಧಿ ಮಾಡಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ –ಸಿಎಂ ಬಿಎಸ್ ವೈ…

Promotion

ಮೈಸೂರು,ಜನವರಿ,23,2021(www.justkannada.in): ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಇರುವ ಶರಣ ಶರಣೆಯರ ಸ್ಥಳಗಳನ್ನು ಅಭಿವೃದ್ಧಿ ಮಾಡಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.action-against -illegal mining- CM BS Yeddyurappa-mysore

ಮೈಸೂರಿನಲ್ಲಿ ನಡೆದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ  ಮುಖ್ಯಮಂತ್ರಿ ಯಡಿಯೂರಪ್ಪ, ಅಕ್ಕಮಹಾದೇವಿ ಕನ್ನಡದ ಮೊದಲ ಮಹಿಳಾ ಕವಿಯತ್ರಿ. ಅತ್ಯಂತ ಚಿಕ್ಕವಯಸ್ಸಿನಲ್ಲೇ ಎಲ್ಲವನ್ನೂ ತ್ಯಜಿಸಿದವರು ಅಕ್ಕಮಹಾದೇವಿ. ಕಲ್ಯಾಣ ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಕ್ಕಮಹಾದೇವಿಯವರು ರಚಿಸಿದ ವಚನಗಳು ಕನ್ನಡ ಸಾಹಿತ್ಯಕ್ಕೆ ಮೌಲಿಕವಾಗಿವೆ. ಅಕ್ಕಮಹಾದೇವಿ ಅವರಂತಹ ಸಾಕ್ಷಿ ಪ್ರಜ್ಞೆ ಎಲ್ಲರಲ್ಲೂ ಇದ್ದರೇ ಕಲ್ಯಾಣ ರಾಜ್ಯ ಸ್ಥಾಪನೆ ಅಸಾಧ್ಯವಲ್ಲ ಎಂದು ಹೇಳಿದರು.government-develop-places-younger-generation-akkamahadevi-statue-cm-bs-yeddyurappa

ಹಾಗೆಯೇ ರಾಜ್ಯಾದ್ಯಂತ ಇರುವ ಶರಣ ಶರಣೆಯರ ಸ್ಥಳಗಳನ್ನು ಅಭಿವೃದ್ಧಿ ಮಾಡುವ ಮೂಲಕ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ  ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಸಿಎಂ ಬಿಎಸ್ ವೈ ನುಡಿದರು.

Key words: government –develop- places – younger generation- akkamahadevi –statue-CM BS yeddyurappa