ಲಾರಿಯಲ್ಲಿ ಸ್ಫೋಟಕ ವಸ್ತು  ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? : ಮಾಜಿ ಸಚಿವ ಯು.ಟಿ.ಖಾದರ್ ಕಿಡಿ

ಮಂಗಳೂರು,ಜನವರಿ,23,2021(www.justkannada.in) : ಲಾರಿಯಲ್ಲಿ ಸ್ಫೋಟಕ ವಸ್ತು  ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಗಣಿಗಾರಿಕೆ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ.jkಶಿವಮೊಗ್ಗ ಜಿಲ್ಲೆಯಲ್ಲಿನ ಸ್ಪೋಟಕ ವಿಚಾರವಾಗಿ ಮಾತನಾಡಿದ ಅವರು, ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವೆ? ಜನ ಸಾಮಾನ್ಯರ ಮರಳು ಗಾಡಿಯನ್ನ ವಶಪಡಿಸಿಕೊಳ್ಳತ್ತಾರೆ. ಯಾಕೆ ಲಾರಿಯಲ್ಲಿ ಸ್ಪೋಟಕ ವಸ್ತು ಸಾಗಾಟ ಮಾಡುವವರನ್ನ ಹಿಡಿಯುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಲಾರಿಯಲ್ಲಿ ಸ್ಪೋಟಕ ವಸ್ತು ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಗಣಿಗಾರಿಕೆ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಇದರಿಂದ ಜನಸಾಮಾನ್ಯರ ಮನೆಗಳು ಹಾಳಾಗಿವೆ. ಯಾಕೆ ಸರಕಾರ ಇದರ ಬಗ್ಗೆ ತನಿಖೆ ಮಾಡಲು ಹಿಂದೇಟು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.Explosive-material-truck-Shipping-Don't know- authorities?-Former-minister-U.T.Khadar

ಮುಂದಿನ‌ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆ ಜನರ ಜೀವನದ ಮೇಲೆ ಗಣಿಗಾರಿಕೆ ಪರಿಣಾಮ ಬೀರಲಿದೆ. ಮನೆ ಹಾಳದವರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

key words : Explosive-material-truck-Shipping-Don’t know- authorities?-Former-minister-U.T.Khadar