ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ : ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪ್ರಕೃತಿ ವಿಕೋಪ ಪರಿಹಾರ ಧನ ಮಂಜೂರು…

kannada t-shirts

ನವದಹೆಲಿ,ನವೆಂಬರ್,13,2020(www.justkannada.in):  ಕೇಂದ್ರ ಸರ್ಕಾರವು  ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮೂಲಕ ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಪ್ರಕೃತಿ ವಿಕೋಪ ಪರಿಹಾರ ಧನ ಬಿಡುಗಡೆಗೆ ಒಪ್ಪಿಗೆ ನೀಡಿದೆ.kannada-journalist-media-fourth-estate-under-loss

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕ ಸೇರಿ 6 ರಾಜ್ಯಗಳಿಗೆ ಒಟ್ಟು 4,382 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಸಿಕ್ಕಿಂ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಒಟ್ಟು 4,382 ಕೋಟಿ ರೂ. ಮಂಜೂರು ಮಾಡಿದೆ.good-news-central-government-natural-disaster-relief-grant-6-states-karnataka

ಪ್ರವಾಹ, ಮುಂಗಾರು ಮಳೆ ಅನಾಹುತ, ಭೂಕುಸಿತ  ಹಿನ್ನೆಲೆ ಕರ್ನಾಟಕಕ್ಕೆ 577 ಕೋಟಿ ರೂ ಪರಿಹಾರ ಬಿಡುಗಡೆಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಿಲಾಗಿದೆ. ಅಂಫಾನ್ ಚಂಡಮಾರುತದಿಂದ ತತ್ತರಿಸಿದ ಪಶ್ಚಿಮ ಬಂಗಾಳಕ್ಕೆ 2,708 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

Key words: Good news – central government-  Natural Disaster- Relief -Grant – 6 States -Karnataka

website developers in mysore