ಭಾನುವಾರವೂ ಕೋವಿಡ್ ಲಸಿಕೆ ನೀಡಲು ಚಿಂತನೆ-ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಸೆಪ್ಟಂಬರ್,25,2021(www.justkannada.in):  ಕೋವಿಡ್ ತಡೆಗಾಗಿ ನಡೆಸಲಾಗುತ್ತಿರುವ ಲಸಿಕೆ ಅಭಿಯಾನ ವಾರದ 7 ದಿನವೂ ನಡೆಯುತ್ತಿತ್ತು. ಯಾವುದೇ ರಜೆ ಇಲ್ಲದೇ, ಆರೋಗ್ಯ ಸಿಬ್ಬಂದಿ ಕೆಲಸ ಮಾಡುತ್ತಿದ್ದರು  ಹೀಗಾಗಿ ರಾಜ್ಯದಲ್ಲಿ ಭಾನುವಾರ ಲಸಿಕೆ ನೀಡದಿರಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಆದರೆ ಸಾರ್ವಜನಿಕರಿಂದ ಭಾನುವಾರವೂ ಲಸಿಕೆ ನೀಡುವಂತೆ ಒತ್ತಡ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಭಾನುವಾರವೂ  ಕೋವಿಡ್ ಲಸಿಕೆ ನೀಡಲು ಚಿಂತನೆ ನಡೆಸಲಾಗುತ್ತದೆ. ಕೆಲವು ವಲಯಗಳಿಂದ ನಮಗೂ ಒತ್ತಡ ಬಂದಿದೆ. ಭಾನುವಾರ ಜನರು ಜಾಸ್ತಿ ಫ್ರೀಯಾಗರುತ್ತಾರೆ. ಹೀಗಾಗಿ ಭಾನುವಾರವೂ ಲಸಿಕೆ ನೀಡುವಂತೆ ಬೇಡಿಕೆ ಬಂದಿದೆ.  ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅದಷ್ಟು ಬೇಗ ಕ್ರಮ ಕೈಗೊಳ್ಳುತ್ತಾರೆ ಎಂದರು.

ಭಾನುವಾರ ಹೊರತುಪಡಿಸಿ ಉಳಿದ 6 ದಿನ ಲಸಿಕೆ ನೀಡಲಾಗುತ್ತೆ. ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು.

Key words: give -covid vaccine -Sunday -CM Basavaraja Bommai.