ಗೌರಿ ಗಣೇಶ ಹಬ್ಬ: ಆರ್ಕೆಸ್ಟ್ರಾ ಕಲಾವಿದರ ಧ್ವನಿ ಕಸಿದ ಕೊರೋನಾ…

ಮೈಸೂರು, ಆಗಸ್ಟ್, 19, 2020(www.justkannada.in): ಗೌರಿಗಣೇಶ ಹಬ್ಬ ಎನ್ನುತ್ತಿದ್ದಂತೆ ಸಂಭ್ರಮವೋ, ಸಂಭ್ರಮ. ಆದರೆ, ಈ ಬಾರಿ ಆ ಸಂಭ್ರಮಕ್ಕೆ ಕೊಕ್ಕೆ ಬಿದ್ದಿದ್ದು, ಆರ್ಕೆಸ್ಟ್ರಾ ನಂಬಿ ಬದುಕುತ್ತಿರುವ ಕಲಾವಿದರ ಪಾಡು ಮೂರಾಬಟ್ಟೆಯಂತಾಗಿದೆ.jk-logo-justkannada-logo

ಹಾಡು, ನೃತ್ಯದ ಮೂಲಕ ಸಾರ್ವಜನಿಕರ ಮನತಣಿಸುತ್ತಿದ್ದ ಆ ಮೂಲಕ ಒಂದಿಷ್ಟು ಹಣಗಳಿಸುತ್ತಿದ್ದ ಆರ್ಕೆಸ್ಟ್ರಾ ಕಲಾವಿದರ ಪಾಡು ಹೇಳದಂತ್ತಾಗಿದೆ. ಕಿವಿಗೆ ಇಂಪು ನೀಡುತ್ತಿದ್ದವರ ಬದುಕು ಕೊರೊನಾದಿಂದ ಕರ್ಕಶವಾಗಿದೆ.
ವಿಘ್ನ ವಿನಾಯಕನ ನಂಬಿದ ಆರ್ಕೆಸ್ಟ್ರಾ ಕಲಾವಿದರ ಬದುಕಿಗೆ ವಿಘ್ನ ಎದುರಾಗಿದೆ. ಗಣಪತಿ ಹಬ್ಬ ಆರಂಭದಿಂದ ಒಂದು ತಿಂಗಳವರೆಗೆ ಆರ್ಕೆಸ್ಟ್ರಾ ಕಲಾವಿದರು ಬ್ಯುಸಿ ಸೆಡ್ಯುಲ್ ನಲ್ಲಿರುತ್ತಿದ್ದರು. ಹಬ್ಬದ ಸಂದರ್ಭದಲ್ಲಿ ಈ ಕಲಾವಿದರಿಗೆ ಡಿಮ್ಯಾಂಡೋ ಡಿಮ್ಯಾಂಡ್.

ಮನೆ, ಮೆನೆಗೆ ಗಣೇಶ ಹಬ್ಬ ಸೀಮಿತ….

ಕೊರೋನಾ ಹಿನ್ನೆಲೆ ಈ ಬಾರಿ ಗಣೇಶ ಹಬ್ಬ ಮನೆಮನೆಗೆ ಸೀಮಿತವಾಗಿದ್ದು, ಗಲ್ಲಿ, ರಸ್ತೆ, ಬೀದಿಬೀದಿಗಳಲ್ಲಿ ಗಣಪತಿ ಕೂರಿಸದಂತೆ ಸರಕಾರದಿಂದ ಖಡಕ್ ಆರ್ಡರ್ ಆಗಿದೆ. ಸರ್ಕಾರದ  ಆದೇಶ ಇದೀಗ ಆರ್ಕೆಸ್ಟ್ರಾ ಕಲಾವಿದರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

ಸಾರ್ವಜನಿಕರಿಗೂ ನಿರಾಶೆ…..

ಕೊರೊನಾ ಕಂಟಕದಿಂದ ದೇವಸ್ಥಾನ, ಮನೆಗಳಿಗೆ ಮಾತ್ರವೇ ಗಣೇಶ ಪ್ರತಿಷ್ಠಾಪನೆಯು ಸೀಮಿತವಾಗಿದೆ. ಹಬ್ಬದ ಸಂದರ್ಭದಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದ ಜನರಿಗೆ ನಿರಾಶೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರವು ಆರ್ಕೆಸ್ಟ್ರಾ ಕಲಾವಿದರ ಹಿತ ಕಾಯುವತ್ತ ಗಮನಹರಿಸಬೇಕಿದೆ.gauri-ganesh-festival-orchestra-artists-voice

ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಹೆಚ್ಚು ಜನರು ಸೇರುವುದನ್ನು ತಡೆಯಲು ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಹೀಗಾಗಿ, ಗೌರಿಗಣೇಶನ ಮೂರ್ತಿಗಳ ತಯಾರಿಸುವ ಕಲಾವಿದರು,  ಬಿದಿರು ನಂಬಿದವರು, ಹಬ್ಬಕ್ಕೆ ಬೇಕಾದ ಇತರೆ ಹೂ, ಹಣ್ಣುಗಳ ಮಾರಾಟಗಾರರಿಗೂ ಸಂಕಷ್ಟ ಎದುರಾಗಿದೆ. ಇವರ ಹಾದಿಯಲ್ಲೇ ಆರ್ಕೆಸ್ಟ್ರಾ ಕಲಾವಿದರೂ ಸಂಕಷ್ಟಕ್ಕೆ ತುತ್ತಾಗಿದ್ದು ಕೊರೋನಾ ಮಹಾಮಾರಿ ಆರ್ಕೆಸ್ಟ್ರಾ ಕಲಾವಿದರ ಧ್ವನಿ ಕಸಿದಂತಾಗಿದೆ.

key words: Gauri Ganesh -Festival- Orchestra- Artists-voice