ಡಿಕೆಶಿ ಮತ್ತು ನಿಮ್ಮಲ್ಲಿ ಹೊಂದಾಣಿಕೆ ತೋರಿಸಿ -ಸಿದ್ದರಾಮಯ್ಯಗೆ ಸಚಿವ ಆರ್.ಅಶೋಕ್ ಸವಾಲು…

ಬೆಂಗಳೂರು, ಆಗಸ್ಟ್, 19, 2020(www.justkannada.in): ಗೃಹ ಸಚಿವರು ಅತಿವೃಷ್ಟಿ ಬಗ್ಗೆ  ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದರೇ  ಕಂದಾಯ ಸಚಿವರು ಬೆಂಗಳೂರಿನಲ್ಲಿಯೇ ಇದ್ದುಕೊಂಡು ಕಾವಲ್ ಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. jk-logo-justkannada-logo

ಗೃಹ ಸಚಿವ ಬಸವರಾಜ ಬೊಮ್ಮಾಯಿ ನಾನು ಆಪ್ತರು. ಹೀಗಾಗಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತಿದ್ದೇವೆ. ಮೊದಲು ಡಿಕೆ ಶಿವಕುಮಾರ್ ಹಾಗೂ ನಿಮ್ಮಲ್ಲಿ ಹೊಂದಾಣಿಕೆ ತೋರಿಸಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ  ಕಂದಾಯ ಸಚಿವ ಆರ್.ಅಶೋಕ್ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್,  ನೀವು ಕೊರೋನಾ ಪಾಸಿಟಿವ್ ಗೆ ತುತ್ತಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಇದ್ದ ಕಾರಣ ನನ್ನ ಕಾರ್ಯದ ಬಗ್ಗೆ ಮಾಹಿತಿ ದೊರಕಿಲ್ಲ. ದಯವಿಟ್ಟು ಮಾಹಿತಿಯನ್ನು ತರಿಸಿಕೊಂಡು ಪರಿಶೀಲಿಸಿ ಎಂದು ಸಲಹೆ ನೀಡಿದರು.

key words: minsiter- R.Ashok-former cm- siddaramaiah-challenge