ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಿಯೂ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ ಆಗಿಲ್ಲ- ಲಕ್ಷ್ಮೀಕಾಂತ ರೆಡ್ಡಿ.

ಮೈಸೂರು,ಫೆಬ್ರವರಿ,24,2022(www.justkannada.in):  ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಿಯೂ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ ಆಗಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಪಾಲಿಕೆ ವ್ಯಾಪ್ತಿಯ ಹೊರ ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ. ಸದ್ಯ ಈ ಬಗ್ಗೆ  ಅನುಮೋದನೆ  ಕೌನ್ಸಿಲ್ ಮುಂದೆ ಇದೆ. ಅನುಮೋದನೆ ನಿರ್ಣಯ ನಂತರ ತಿಳಿಸಲಾಗುವುದು.  ಈ ಹಿನ್ನೆಲೆ ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿಯು ಕೆಲಸ ನಡೆಯುತ್ತಿಲ್ಲ  ಎಂದು ತಿಳಿಸಿದರು.

ದೇಶದ ಸ್ವಚ್ಛ ನಗರಿಯ ಟಾಪ್ 10ನಲ್ಲಿ ಮೈಸೂರು ಸ್ಥಾನಗಳಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೀಕಾಂತ ರೆಡ್ಡಿ, ದೇಶದ ಕ್ಲಿನ್ ಸಿಟಿಗಳ ನಡುವೆ ಪೈಪೋಟಿ ಮಾಡುತ್ತಿದ್ದೇವೆ. ನಮ್ಮಲ್ಲಿದ್ದ ಸಮಸ್ಯೆಗಳನ್ನ ಸರಿಪಡಿಸಿಕೊಂಡಿದ್ದೇವೆ. ಯಾವೆಲ್ಲ ಕ್ರಮಗಳನ್ನ ಅನುಸರಿಸಬೇಕೋ ಅದೆಲ್ಲವನ್ನು ಮಾಡುತ್ತಿದ್ದೇವೆ. ಪ್ರತಿ ವಾರ್ಡ್ ನಲ್ಲೂ ಕೆಲಸ ಮಾಡುತ್ತಿದ್ದೇವೆ. ಪ್ರತಿ ಮನೆಗಳಲ್ಲೂ ಕಸ ಸಂಗ್ರಹಕ್ಕೆ ಮನೆಯ ಮುಂದಕ್ಕೆ ಆಟೋಗಳನ್ನು ಕಳುಹಿಸುತ್ತಿದ್ದೇವೆ. 65 ವಾರ್ಡ್ ಗಳಿಗೂ 65 ಆಟೋ ಗಳನ್ನ ನೀಡಲಾಗುತ್ತಿದೆ. ಟ್ರಾಕ್ಟರ್,  ಟಿಪ್ಪರ್  ಗಳನ್ನ ನೀಡಲು ಸರ್ಕಾರ ಅನುಮತಿ ನೀಡಿದೆ.

ಸ್ವಚ್ಛ ಅಭಿಯಾನ ಹಿನ್ನೆಲೆ ಪಾಲಿಕೆಯಿಂದ ಹೆಚ್ಚಿನ ಸಿದ್ಧತೆಗಳು ನಡೆಯುತ್ತಲೇ ಇವೆ. ಮನೆ ಮನೆ ಕಸ ಸಂಗ್ರಹಕ್ಕೆ ಪಾಲಿಕೆ ಮುಂದಾಗಿದೆ. ಕಸ ವಿಲೇವಾರಿಗೆ ರಾಯನಕೆರೆ ಕೆಸರೆ ಹಾಗೂ ವಿದ್ಯಾರಣ್ಯ ಪುರಂಗೆ ಹಂಚಿಕೆ ಮಾಡಲಾಗುತ್ತಿದ್ದು. ಶೀಘ್ರದಲ್ಲೇ ಆಧುನಿಕರಣದೊಂದಿಗೆ ಕಸ ವಿಲೇವಾರಿ ಮಾಡಲಾಗುತ್ತದೆ. ಇದೆಲ್ಲರ ಅಂಶಗಳು ಸೇರ್ಪಡೆಗೊಂಡು ಮೈಸೂರು ಟಾಪ್ 10ನಲ್ಲಿ ಬರುವ ನಿರೀಕ್ಷೆ ಇದೆ ಎಂದು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Key words: Gas-pipeline –work-mysore-city corporation