ಮೈಸೂರು ನಗರ ಅಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ: ವಿದಾಯದ ನುಡಿಗಳನ್ನಾಡಿದ ಮೇಯರ್ ಸುನಂದ ಪಾಲನೇತ್ರ

ಮೈಸೂರು,ಫೆಬ್ರವರಿ,24,2022(www.justkannada.in): ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ‌ಕಾರ್ಯ ಮಾಡಿದ್ದೇನೆ. ಮೈಸೂರು ನಗರದ ಅಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದ ಪಾಲನೇತ್ರ ಹೇಳಿದರು.

ಇಂದು ಮೈಸೂರು ಮೇಯರ್ ಅವಧಿ ಅಂತ್ಯ ಹಿನ್ನೆಲೆ, ಮೇಯರ್ ಸುನಂದ ಪಾಲನೇತ್ರ ಸುದ್ದಿಗೋಷ್ಠಿ ನಡೆಸಿ ವಿದಾಯದ ನುಡಿಗಳನ್ನಾಡಿದರು. ಮೇಯರ್ ಅವಧಿ ಕೈಗೊಂಡ ಕಾರ್ಯಕ್ರಮಗಳ ವರದಿ ಓದಿದ ಮೇಯರ್ ಸುನಂದ ಪಾಲನೇತ್ರ, ಸಹಕರಿಸಿದ ಎಲ್ಲಾ ಹಾಲಿ, ಮಾಜಿ ಜನಪ್ರತಿನಿಧಿಗಳಿಗೆ , ಅಧಿಕಾರಿ ವರ್ಗಕ್ಕೆ ಧನ್ಯವಾದಗಳು. ನನ್ನ  ಅವಧಿಯಲ್ಲಿ ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಅವಧಿಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಮೈಸೂರು ನಗರದಾದ್ಯಂತ ಗುಂಡಿ ಮುಚ್ವುವ ಕಾರ್ಯ ಪ್ರಗತಿಯಲ್ಲಿದೆ. 65 ವಾರ್ಡ್ ಗಳಿಗೆ 650 ಲಕ್ಷ  ರೂ. ಗಳ ಅನುದಾನ ಗುಂಡಿ ಮುಚ್ಚು ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದ ಒಳಗೆ ರಸ್ತೆ ಗುಂಡಿಮುಚ್ಚುವ ಕಾರ್ಯ ಪೂರ್ಣಗೊಳ್ಳಲಿದೆ. 8.72 ಕಿ.ಮೀ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಬ್ಲಿಕ್ ಬೈಸಿಕಲ್ ಶೇರಿಂಗ್ ಯೋಜನೆ ಆಧುನೀಕರಿಸಲು ಯೋಜನೆ ರೂಪಿಸಲಾಗಿದೆ. ಪುರಭವನ ಬೇಸ್ಮೆಟ್ ಪಾರ್ಕಿಂಗ್ ಹೊರಾಂಗಣ ಅಭಿವೃದ್ಧಿ ಕಾಮಗಾರಿ ಉಳಿಕೆ ಕಾಮಗಾರಿ ಪ್ರಾರಂಭಿಸಲಾಗಿದೆ.

ಅಜೀಜ್ ಸೇಠ್ ಮುಖ್ಯ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಾಗಾರಿ. ರುದ್ರ ಭೂಮಿಗಳ ಅಭಿವೃದ್ಧಿ, ಪಾಲಿಕೆ ವಾಹನಗಳ ನಿಲುಗಡೆ ಆವರಣ ಅಭಿವೃದ್ಧಿ, ವಿವಿಧ ವಲಯ ಕಛೇರಿಗಳ ಕಟ್ಟಡ ನಿರ್ಮಾಣ ಕಾಮಗಾರಿ, ಪಾರಂಪರಿಕ ತ್ಯಾಜ್ಯ ಬಯೋ‌ ಮೈನಿಂಗ್ ಮಾಡುವುದು. ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ, ಸಾಗಣಿಕೆಗೆ ಒತ್ತು ನೀಡಲಾಗಿದೆ. ಕೆಸರೆ, ರಾಯನಕೆರೆ, ವಿದ್ಯಾರಣ್ಯಪುರಂ ಘನ ತ್ಯಾಜ್ಯ ಸಂಸ್ಕರಾಣಾ ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಡಿಪಿಆರ್ ತಯಾರಿಯಾಗಿದ್ದು, ಕೌನ್ಸಿಲ್ ಅನುಮೋದನೆ ಆಗಿದೆ.  ಹಂದಿ ಸಾಕಾಣಿಕಾ ಕೇಂದ್ರದಲ್ಲಿ ಮೂಲ ಸೌಕರ್ಯ ಕಾಮಗಾರಿ ಏಪ್ರಿಲ್ ಒಳಗೆ ಅಂತ್ಯವಾಗಲಿದೆ ಎಂದು ಸುನಂದ ಪಾಲನೇತ್ರ ಮಾಹಿತಿ ನೀಡಿದರು.

ಮಹಿಳೆಯರಿಗಾಗಿ ಪಿಂಕ್ ಶೌಚಾಲಾಯ ನಿರ್ಮಾಣ ಮಾಡಲಾಗುತ್ತಿದೆ. ಮಳೆಯಿಂದ ಸಮಸ್ಯೆ ಆಗುತ್ತಿದ್ದು, ಒಳಚರಂಡಿ ಮುಖ್ಯ ಕೊಳವೆ ಮಾರ್ಗ ಅಳವಡಿಸಲಾಗಿದೆ. ಇದುವರೆವಿಗೆ 58 ಕೋಟಿ ನೀರಿನ ತೆರಿಗೆ ಸಂಗ್ರಹ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ 35 ರಷ್ಟು ಹೆಚ್ಚಳ ಆಗಿದೆ ಎಂದು ತಿಳಿಸಿದರು.

ಪಾಲಿಕೆ ಇತಿಹಾಸದಲ್ಲಿ ಮೊದಲಬಾರಿಗೆ ಬಿಜೆಪಿ ಮೇಯರ್ ಹುದ್ದೆ ಅಲಂಕರಿಸಿತ್ತು. ಇಂದು ಮೇಯರ್ ಅವಧಿ ಅಂತ್ಯ ಹಿನ್ನಲೆ, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಕಸರತ್ತು ಶುರುವಾಗಿದ್ದು, ರಾಜ್ಯ ಬಜೆಟ್ ಬಳಿಕ ಮೇಯರ್ ಚುನಾವಣೆಗೆ ದಿನಾಂಕ ಫಿಕ್ಸ್ ಆಗಲಿದೆ.

Key words: End -term Mysore-Mayor -Sunanda Palanetra