ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ, ಪರಿಶೀಲನೆ.

Promotion

ಮೈಸೂರು,ಆಗಸ್ಟ್,26,2021(www.justkannada.in): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಎಡಿಜಿಪಿ ಪ್ರತಾಪ್ ರೆಡ್ಡಿ  ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಈ ವೇಳೆ  ತನಿಖೆ ಪ್ರಗತಿ ಬಗ್ಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಮಾಹಿತಿ ಪಡೆದಿದ್ದಾರೆ. ಜೊತೆಗೆ ಈ ಹಿಂದೆ ಅತ್ಯಾಚಾರ ನಡೆದ ಸ್ಥಳದಲ್ಲಿ ಆಗಿರುವ ಕೆಲ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಮದ್ಯ ಪಾರ್ಟಿಗಳು ನಡೆಯುತ್ತಿದ್ದವಾ? ಯುವಕ, ಯುವತಿ ಈ ಸ್ಥಳಕ್ಕೆ ಬರುವುದಕ್ಕೆ ಕಾರಣವೇನು? ಪ್ರತಿಯೊಂದು ವಿಚಾರದ ಬಗ್ಗೆಯೂ ಎಡಿಜಿಪಿ ಪ್ರತಾಪ್ ರೆಡ್ಡಿ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮೊಬೈಲ್ ಟವರ್ ಲೊಕೇಶನ್ನಿಂದ ಆರೋಪಿ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದು ಸದ್ಯ ಸ್ಥಳದಲ್ಲಿ ಸಾವಿರಾರು ಮೊಬೈಲ್ ನಂಬರ್ ಬಳಕೆಯಾಗಿರುವುದು ಪತ್ತೆಯಾಗಿದೆ. ಮೊಬೈಲ್ ನಂಬರ್ ಗಳನ್ನ ಫಿಲ್ಟರ್ ಮಾಡಲಾಗುತ್ತಿದೆ. ಮೊದಲಿಗೆ ಸಂತ್ರಸ್ತೆಯ ಸ್ನೇಹಿತನ ಮೊಬೈಲ್ ಬಳಕೆಯಾಗಿರುವ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಇಂದು‌ ಕೂಡ ನಂಬರ್ ಟ್ರೇಸಿಂಗ್ ಮಾಡಲಾಗಿದೆ. ಇಂದು ಯುವಕ ನಂಬರ್ ಬಳಕೆ ಮಾಹಿತಿ ಸಿಕ್ಕಿದೆ. ಸದ್ಯ ನಂಬರ್ ಫಿಲ್ಟರ್ ಮಾಡಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ENGLISH SUMMARY…..

Gang rape case in Mysuru: ADGP Pratap Reddy visits spot, inspects
Mysuru, August 26, 2021 (www.justkannada.in): Additional Director General of Police Pratap Reddy today visited the spot where the incident of gang rape has taken place in Mysuru and inspected.
Police investigation, in this case, has gained momentum with the visit of ADGP Pratap Reddy and Mysuru City Police Commissioner Chandragupta. The police are accumulating all information related to the crime.
Efforts are made to trace the accused by tracking through the mobile phone tower. It is learnt that the police have zeroed on the mobile number of the victim’s friend who had accompanied her on that day.
Keywords: Mysuru/ gang rape incident/ crime/ ADGP Pratap Reddy/ inspects/ investigation

 

Key words: Gang rape- case – Mysore-ADGP- Pratap Reddy -visit -spot