ಅಭಿಮಾನಿಗಳಿಗೆ ಬೇಸರ ಸುದ್ದಿ ನೀಡಿದ ಸೆರೆನಾ ವಿಲಿಯಮ್ಸ್

ಬೆಂಗಳೂರು, ಆಗಸ್ಟ್ 26, 2021 (www.justkannada.in): ಸೆರೆನಾ ವಿಲಿಯಮ್ಸ್ ಅಭಿಮಾನಿಗಳಿಗೆ ಬೇಸರ ಸುದ್ದಿಯೊಂದನ್ನು ಹೇಳಿದ್ದಾರೆ.

ಹೌದು. ಯುಎಸ್‌ನಲ್ಲಿ ನಡೆಯಲಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಸೆರೆನಾ ಪ್ರಕಟಿಸಿದ್ದಾರೆ.

ಟೋರ್ನ್ ಹ್ಯಾಮ್‌ಸ್ಟ್ರಿಂಗ್‌ ಸಂಪೂರ್ಣವಾಗಿ ಗುಣವಾಗಿಲ್ಲವಾದ್ದರಿಂದ ವರ್ಷದ ಕೊನೇಯ ಗ್ರ್ಯಾಂಡ್‌ಸ್ಲ್ಯಾಮ್‌ ಟೂರ್ನಿಯಲ್ಲಿ ತನಗೆ ಪಾಲ್ಗೊಳ್ಳಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟು ಆರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸೆರೆನಾ ವಿಲಿಯಮ್ಸ್ ಈ ಸೀಸನ್‌ ಇಡೀ ಬಹುತೇಕ ಗಾಯದಿಂದ ಬಳಲುತ್ತಿದ್ದಾರೆ.