ಸರ್ಕಾರ ಸುಭದ್ರವಾಗಿದೆ. ಆದ್ರೆ ಐದು ವರ್ಷ ಇರುತ್ತೆ ಅಂತಾ ಹೇಳೋಕೆ ಆಗಲ್ಲ : ಸಚಿವ ಜಿ.ಟಿ.ದೇವೇಗೌಡ

Promotion

 

ಮೈಸೂರು, ಜು.13, 2019 : (www.justkannada.in news) ಸದ್ಯದ ಪರಿಸ್ಥಿಯಲ್ಲಿ ಸಮ್ಮಿಶ್ರ ಸರಕಾರ ಐದು ವರ್ಷ ಇರುತ್ತೆ ಎಂದು ನಾನು ಹೇಳಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ,ದೇವೇಗೌಡ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿಟಿಡಿ ಹೇಳಿದಿಷ್ಟು….

ರಾಷ್ಟ್ರಕ್ಕೆ ಕೇಳುವ ಹಾಗೆ ಸಿಎಂ ಹೇಳಿದ್ದಾರೆ. ವಿಶ್ವಾಸ ಮಂಡನೆ ಮಾಡಲು ಸಿಎಂ ದಿನಾಂಕ ಕೇಳಿದ್ದಾರೆ. ದಿ‌ನಾಂಕ ಕೊಟ್ಟಿರುವ ದಿನ ವಿಶ್ವಾಸ ಮಂಡಿಸುತ್ತಾರೆ. ಎಲ್ಲರೂ ಕೂಡ ಬರುತ್ತಾರೆ. ಸರಕಾರ ಉಳಿಯುತ್ತದೆ. ಆದರೆ ಐದು ವರ್ಷ ಸರ್ಕಾರ ಇರುತ್ತೆ ಅಂತಾ ನಾನು ಹೇಳೋಕೆ ಆಗಲ್ಲ.
ಎಲ್ಲರಿಗೂ ಭಯ ಇದೆ. ಆದ್ರೆ ಸದ್ಯ ನಮಗೆ ಭಯವಿಲ್ಲ. ಮುಂಬೈಗೆ ಮತ್ತೆ ನಾನು ಹೋಗಲ್ಲ. ಎಲ್ಲವೂ ಇಲ್ಲೆ ಆಗುತ್ತದೆ.
ಮೈಸೂರಿನಲ್ಲಿ ಸಚಿವ ಜಿಟಿ ದೇವೇಗೌಡ ಹೇಳಿಕೆ.

 

key words : g.t.devegowda-mysore-jds