ಮೈಸೂರು ವಕೀಲರು ನಮ್ಮನ್ನ ಪ್ರಶಂಸಿಸಬೇಕು ಎಂದು ನಳಿನಿ ಪರ ವಕಾಲತ್ತು ಹಾಕಿರುವ ವಕೀಲರು ಹೇಳಿದ್ದೇಕೆ ಗೊತ್ತಾ…?

Promotion

ಮೈಸೂರು,ಜ,24,2020(www.justkannada.in):ಫ್ರೀ ಕಾಶ್ಮೀರ ಪ್ಲೆ ಕಾರ್ಡ್ ಪ್ರದರ್ಶನ ಪ್ರಕರಣ ಸಂಬಂಧ, ಒಂದು ವೇಳೆ ನಳಿನಿ ದೇಶದ್ರೋಹಿ ಅಂತಾ ಸಾಭೀತಾದ್ರೆ, ನಾವು ಅದಕ್ಕಾಗಿ ಹೆಲ್ಪ್ ಮಾಡ್ತಿದ್ದಿವಿ ಅಂತಾ ನಮ್ಮನ್ನ ಪ್ರಶಂಶಿಸಬೇಕು ಎಂದು ನಳಿನಿ ಪರ ವಕೀಲ ಜಗದೀಶ್ ಹೇಳಿದರು.

ಪ್ರಕರಣ ಸಂಬಂಧ ನಳಿನಿ ಜಾಮೀನು ಅರ್ಜಿಯನ್ನ ಮೈಸೂರಿನ 2ನೇ ಹೆಚ್ಚುವರಿ ನ್ಯಾಯಾಲಯ ಮಧ್ಯಾಹ್ಯ 3 ಗಂಟೆಗೆ ಮುಂದೂಡಿದೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ನಳಿನಿ ಪರ ವಕೀಲ ಜಗದೀಶ್, ನಾವು ಮೈಸೂರು ವಕೀಲರ ಸಂಘದ ಪರವಾಗಿ ಯಾವುದೇ ಕಾಮೆಂಟ್ ಮಾಡಲ್ಲ. ಮೈಸೂರು ವಕೀಲರು ಬೆಂಗಳೂರಿಗೆ ಬರ್ತಾರೆ. ಅದೇ ರೀತಿ ನಾವು ಇಲ್ಲಿಗೆ ಬರ್ತಿವಿ. ನಾವೆಲ್ಲರೂ ಅಣ್ಣತಮ್ಮರಿದ್ದಂತೆ. ನಮ್ಮ ವೃತ್ತಿ ಧರ್ಮ ನಾವು ಪಾಲಿಸುತ್ತಿದ್ದೇವೆ ಎಂದರು.

ನಳಿನಿ ದೇಶದ್ರೋಹಿ ಅಂತಾ ಪ್ರೂ ಮಾಡಲಿಕ್ಕಾದರೂ ವಾದ ಮಾಡಬೇಕಲ್ಲ. ನಾವು ಕೇಸ್ ಪರವಾಗಿ ವಕಾಲತ್ತು ವಹಿಸದಿದ್ರೆ ಯಾವುದು ಗೊತ್ತಾಗಲ್ಲ. ನಳಿನಿ ದೇಶದ್ರೋಹಿ ಅಥವಾ ದೇಶದ್ರೋಹಿಯಲ್ಲ ಎಂಬುವುದನ್ನ ನ್ಯಾಯಾಲಯ ನಿರ್ಧಾರ ಮಾಡುತ್ತದೆ. ನಳಿನಿ ಪರ ವಕಾಲತ್ತು ವಹಿಸಿದ್ದೇವೆ, ಈಗ ಮಧ್ಯಾಹ್ನ 3ಕ್ಕೆ ವಿಚಾರಣೆ ಮುಂದೂಡಲಾಗಿದೆ. ಒಂದು ವೇಳೆ ನಳಿನಿ ದೇಶದ್ರೋಹಿ ಅಂತಾದ್ರೆ, ನಾವು ಅದಕ್ಕಾಗಿ ಹೆಲ್ಪ್ ಮಾಡ್ತಿದ್ದಿವಿ ಅಂತಾ ನಮ್ಮನ್ನ ಪ್ರಶಂಶಿಸಬೇಕು. ನಮ್ಮ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ಆಗುತ್ತಿದೆ. ಆದ್ರೆ ನಾವು ನಮ್ಮ ವೃತ್ತಿ ಧರ್ಮವನ್ನ ಪಾಲಿಸುತ್ತಿದ್ದೇವೆ ಎಂದು ನಳಿನಿ ಪರ ವಕೀಲ ಜಗದೀಶ್  ಹೇಳಿದರು.

 

Key words: Free Kashmir -Play Card –show –case-Court -decides – Nalini -lawyer