Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಹೆಚ್.ಡಿ ಕುಮಾರಸ್ವಾಮಿಗೆ ಪಾಕ್ ಮೇಲೆ ಪ್ರೀತಿ ಹೆಚ್ಚಾಗಿದೆ: ದೇಶಬಿಟ್ಟು ತೊಲಗಲಿ-ಸಚಿವ ಶ್ರೀರಾಮುಲು ಕಿಡಿ…

ಹೆಚ್.ಡಿ ಕುಮಾರಸ್ವಾಮಿಗೆ ಪಾಕ್ ಮೇಲೆ ಪ್ರೀತಿ ಹೆಚ್ಚಾಗಿದೆ: ದೇಶಬಿಟ್ಟು ತೊಲಗಲಿ-ಸಚಿವ ಶ್ರೀರಾಮುಲು ಕಿಡಿ…

ಚಿತ್ರದುರ್ಗ,ಜ,24,2020(www.justkannada.in): ಭೂಪಟದಲ್ಲಿ ಪಾಕ್ ಇರದಿದ್ದರೇ ಬಿಜೆಪಿಗೆ ಮತ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಆರೋಗ್ಯ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಹೆಚ್.ಡಿ ಕುಮಾರಸ್ವಾಮಿಗೆ ಪಾಕ್ ಮೇಲೆ  ಪ್ರೀತಿ ಹೆಚ್ಚಾಗಿದೆ. ಪಾಕ್ ಮೇಲೆ ಪ್ರೀತಿ ಇರುವ ಅವರು  ದೇಶಬಿಟ್ಟು ತೊಲಗಲಿ. ಹೆಚ್.ಡಿಕೆ ಮಾಜಿ ಪ್ರಧಾನಿ ಪುತ್ರ, ಮಾಜಿ ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯಗೂ ಕುಟುಕಿದ ಸಚಿವ ಶ್ರೀರಾಮುಲು, ಇತ್ತೀಚೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ಯಾರಿಗೂ ಬೇಡವಾಗಿದ್ದಾರೆ  ಕಾಂಗ್ರೆಸ್ ಡೆತ್ ಆಗಿರುವ ಪಾರ್ಟಿಯಾಗಿದೆ ಎಂದು ಲೇವಡಿ ಮಾಡಿದರು.

Key words:  love -Pakistan –former cm-HD Kumaraswamy- Minister Sriramulu