Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುಗೆ ಅಭಿಮಾನದ ಬೀಳ್ಕೊಡುಗೆ

ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುಗೆ ಅಭಿಮಾನದ ಬೀಳ್ಕೊಡುಗೆ

ಮೈಸೂರು,ಆಗಸ್ಟ್,26,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಸತತ ಹಲವು ವರ್ಷಗಳ ಕಾಲ ಅಂಬಾರಿ ಹೊತ್ತು ನಾಡಿನ ಗಮನ ಸೆಳೆದಿದ್ದ ದಸರಾ ಅಂಬಾರಿ ಆನೆ ಅಭಿಮನ್ಯುಗೆ ವೀರನಹೊಸಹಳ್ಳಿಯಲ್ಲಿ ಅಭಿಮಾನದ ಬೀಳ್ಕೊಡುಗೆ ನೀಡಲಾಯಿತು.

2026ರ ಮೈಸೂರು ದಸರಾ ಗಜಪಯಣಕ್ಕೆ ವೀರನಹೊಸಹಳ್ಳಿ ಬಳಿ ಅದ್ದೂರಿ ಚಾಲನೆ ನೀಡಿದ ಸಂದರ್ಭದಲ್ಲಿ ಅಭಿಮನ್ಯುವಿನ ಸೇವೆಯನ್ನು ಸ್ಮರಿಸಿ, ಅರಣ್ಯ ಇಲಾಖೆ ಹಾಗೂ ದಸರಾ ಆನೆಗಳ ಪಯಣಕ್ಕೆ ಆಗಮಿಸಿದ್ದ ಗಣ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಗೌರವ ಸಲ್ಲಿಸಿದರು.ಮೈಸೂರು ದಸರಾ ಅಂಬಾರಿ ಆನೆ Abhimanyu.jpg1

ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಮೂಲಕ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಗಿದ್ದ ಅಭಿಮನ್ಯು, ತನ್ನ ಶಾಂತ ಸ್ವಭಾವ, ಶಿಸ್ತು ಮತ್ತು ಗಾಂಭೀರ್ಯದಿಂದ ಲಕ್ಷಾಂತರ ದಸರಾ ಪ್ರೇಮಿಗಳ ಮನಗೆದ್ದಿದ್ದಾನೆ. ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅಭಿಮನ್ಯುವಿನ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ವೀರನಹೊಸಹಳ್ಳಿಯ ಗಜಪಯಣ ಕಾರ್ಯಕ್ರಮದಲ್ಲೇ ಅಭಿಮನ್ಯುವಿಗೆ ವಿಶೇಷವಾಗಿ ‘Send Off’ ನೀಡುವ ಮೂಲಕ ಗೌರವ ಸೂಚಿಸಲಾಯಿತು. ಅಭಿಮನ್ಯುವನ್ನು ಕಂಡ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುಗೆ ಅಭಿಮಾನದ ಬೀಳ್ಕೊಡುಗೆ Abhimanyu Abhimanyu 2

ದಸರಾ ಗಜಪಯಣಕ್ಕೆ ಚಾಲನೆ ದೊರೆಯುವ ಕ್ಷಣದಲ್ಲೇ ಅಂಬಾರಿ ಆನೆ ಅಭಿಮನ್ಯುವಿಗೆ ದೊರೆತ ಈ ಅಭಿಮಾನದ ಬೀಳ್ಕೊಡುಗೆ ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.mysore jk02_new jk02 new

ಮೈಸೂರು ದಸರೆಯ ಅಂಬಾರಿ ಹೊತ್ತ ಅಭಿಮನ್ಯುವಿನ ಸೇವೆ ಮತ್ತು ನೆನಪುಗಳು ದಸರಾ ಇತಿಹಾಸದಲ್ಲಿ ಸದಾ ಅಚ್ಚಳಿಯದೆ ಉಳಿಯಲಿವೆ.

ENGLISH SUMMARY…

Emotional Farewell to Dasara Elephant Abhimanyu

Mysuru: A special farewell was given to Dasara’s iconic elephant Abhimanyu during the Gajapayana ceremony at Veeranahosahalli.

Abhimanyu, who carried the golden howdah during the Mysuru Dasara celebrations for several years, received an emotional send-off from forest department officials, dignitaries and the public.

His remarkable service, discipline and majestic presence have made him one of the most beloved elephants in Mysuru Dasara history.

Key words: Emotional, Farewell, Mysore Dasara, Elephant, Abhimanyu