ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ನಿಧನ…

Promotion

ನವದೆಹಲಿ,ಜು.20,2019(www.justkannada.in):   ಅನಾರೋಗ್ಯದಿಂದ ಬಳಲುತ್ತಿದ್ದ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್(81)  ಅವರು ಇಂದು ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಶೀಲಾ ದೀಕ್ಷಿತ್ ಅವರನ್ನು ಇಂದು ಬೆಳಗ್ಗೆಯಷ್ಟೇ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಾಗಿತ್ತು. 1998ರಿಂದ 2013ರವರೆಗೆ ಸತತ ಮೂರು ಅವಧಿಗೆ ದೆಹಲಿ ಸಿಎಂ ಆಗಿ ಶೀಲಾದೀಕ್ಷಿತ್ ಅವರು  ಸೇವೆ ಸಲ್ಲಿಸಿದ್ದರು.  ಶೀಲಾ ದೀಕ್ಷಿತ್  ಕೇರಳ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಅವರು, ಪಕ್ಷಕ್ಕೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಸದಾ ಮುಂಚೂಣಿಯಲ್ಲಿದ್ದರು.

Key words: Former -Delhi CM- Sheila Dixit- passed away.