ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ರಮೇಶ್ ಆತ್ಮಹತ್ಯೆ ವಿಚಾರ: ಐಟಿ ವಿರುದ್ದವೇ ದೂರು ನೀಡಿದ ಕುಟುಂಬಸ್ಥರು…

Promotion

ಬೆಂಗಳೂರು,ಅ,12,2019(www.justkannada.in): ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರು ಆತ್ಮಹತ್ಯೆಗೆ ಸಂಬಂಧಿಸಿದಂತೆ ರಮೇಶ್ ಕುಟುಂಬಸ್ಥರು, ಐಟಿ ಇಲಾಖೆಯ ವಿರುದ್ದವೇ ದೂರು ನೀಡಿದ್ದಾರೆ.

ಐಟಿ ಅಧಿಕಾರಿಗಳ  ಕಿರುಕುಳದಿಂದಲೇ ರಮೇಶ್ ಆತ್ಮಹತ್ಯೆಗೆ  ಶರಣಾಗಿದ್ದಾರೆಂದು ಕುಟುಂಬಸ್ಥರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಘಟನಾ ಸ್ಥಳದಲ್ಲಿಯೇ ಮೃತ ರಮೇಶ್ ಸಹೋದರಿ ಲಕ್ಷ್ಮೀದೇವಿ ಜ್ಞಾನ ಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಮೃತ ರಮೇಶ್ ಅವರ ತಂದೆ, ತಾಯಿ, ಪತ್ನಿ , ಸಹೋದರ, ಸಹೋದರಿ  ಬಳಿ ಪೊಲೀಸರು ಹೇಳಿಕೆ ಪಡೆದಿದ್ದಾರೆ. ರಮೇಶ್ ಆತ್ಮಹತ್ಯೆಗೆ ಐಟಿ ಕಿರುಕುಳವೇ ಕಾರಣ. ಇಲ್ಲಸಲ್ಲದ ಪ್ರಶ್ನೆಗಳನ್ನ ಕೇಳಿ ಐಟಿ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿದ್ದಾರೆ. ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಇನ್ನು ರಮೇಶ್ ಅವರ ಅಂತ್ಯಕ್ರಿಯೆ ನಾಳೆ ರಾಮನಗರದ  ಮೇಳೆಹಳ್ಳಿಯಲ್ಲಿ  ನಡೆಯಲಿದೆ.

Key words: Former DCM-parameshwar-PA- Ramesh- suicide-complain- against -IT.