ಅತೃಪ್ತ ಶಾಸಕ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತುಕತೆ: ಮನವೊಲಿಕೆ..?

Promotion

ಬೆಂಗಳೂರು,ಮೇ,27,2019(www.justkannada.in): ಬಿಜೆಪಿ ಸಂಪರ್ಕದಲ್ಲಿದ್ದಾರೆನ್ನಲಾದ ಅತೃಪ್ತ ಕಾಂಗ್ರೆಸ್  ಶಾಸಕರ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿ ಅವರ ಮನವೊಲಿಕೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಚಿವ ಸ್ಥಾನ ನೀಡದ ಹಿನ್ನೆಲೆ ಅತೃಪ್ತಗೊಂಡಿರುವ 9 ಕಾಂಗ್ರೆಸ್ ಶಾಸಕರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಯಕತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಡಿದೆ. ಈ ಹಿನ್ನೆಲೆ ನಿನ್ನೆ ರಾತ್ರಿ ಅತೃಪ್ತ ಶಾಸಕರ ಜತೆ ಮಾಜಿ ಸಿಎಂ ಸಿದ್ದರಾಮುಯ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಅತೃಪ್ತ ಶಾಸಕರಾದ ಬಿ.ಸಿಪಾಟೀಲ್, ಆನಂದ್ ಸಿಂಗ್,ನಾಗೇಶ್, ಕಂಪ್ಲಿ ಶಾಸಕ ಗಣೇಶ್,ಶಿವರಾಮ್ ಹೆಬ್ಬಾರ್ ಪ್ರತಾಪ್ ಗೌಡ ಪಾಟೀಲ್, ಪಕ್ಷೇತರ ಶಾಸಕ ಆರ್.ಶಂಕರ್ ಅವರ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ ಈ ಮೂಲಕ  ರಮೇಶ್ ಜಾರಕಿಹೊಳಿಯನ್ನ ಏಕಾಂಕಿಯಾಗಿ ಮಾಡಿ ಅವರ ನಾಯಕತ್ವ ಡಮ್ಮಿ ಮಾಡುವುದೇ ಸಿದ್ದರಾಮಯ್ಯ ಅವರ ಪ್ಲಾನ್ ಆಗಿದೆ,

ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ತನ್ನ ಜತೆಗೆ ಇತರೇ ಶಾಸಕರನ್ನ ಬಿಜೆಪಿಗೆ ಕರೆದೊಯ್ಯಲು ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿತ್ತು.

Key words: Former CM Siddaramaiah talks with dissatisfied MLA

#Siddaramaiah #talks #MLA #bangalore