Wednesday, August 19, 2026

BDA Apartments

Home Front Page ಬೆಂಗಳೂರಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ: ಧರೆಗುರುಳಿದ 100ಕ್ಕೂ ಹೆಚ್ಚು ಮರಗಳು…

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ: ಧರೆಗುರುಳಿದ 100ಕ್ಕೂ ಹೆಚ್ಚು ಮರಗಳು…

ಬೆಂಗಳೂರು,ಮೇ,27,2019(www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾದ ಹಿನ್ನೆಲೆ ನಗರದಲ್ಲಿ  ವಿವಿಧೆಡೆ 100ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಮರಗಳು ವಿದ್ಯುತ್ ಕಂಬಗಳು ಧರೆಗುರುಳಿದ್ದು  ಮಲ್ಲೇಶ್ವರಂ ಮತ್ತು ವಿಜಯನಗರದಲ್ಲಿ ಹೆಚ್ಚು ಮರಗಳ ಮುರಿದು ಬಿದ್ದಿವೆ. ಮಲ್ಲೇಶ್ವರಂನ 3ನೇ ಕ್ರಾಸ್ ನಲ್ಲಿ ಮರ ಉರುಳಿದ ಪರಿಣಾಮ ಎರಡು ಬೈಕ್ ಗಳು ಜಖಂಗೊಂಡಿವೆ.

ಇನ್ನು ಬಿಬಿಎಂಪಿ ಸಿಬ್ಬಂದಿಯ 21 ತಂಡಗಳು ಧರೆಗುರುಳಿರುವ ಮರಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿವೆ. ಡಿಸಿಎಂ ಪರಮೇಶ್ವರ್ ವಿಜಯನಗರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ.

Key words: The heavy rainfall in Bangalore. More than 100 trees that have fallen.

#rain #Bangalore # trees  #fallen.