ಮಾಜಿ ಸಿಎಂ ಸಿದ್ಧರಾಮಯ್ಯರಿಂದ ಮೈಸೂರು-ಬೆಂಗಳೂರು ಹೆದ್ಧಾರಿ ಪರಿಶೀಲನೆ ಕಾರ್ಯಕ್ರಮ ರದ್ದು.

Promotion

ಮೈಸೂರು, ಮಾರ್ಚ್‌,9,2023(www.justkannada.in):  ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ಹೈವೇ ನಿರ್ಮಾಣ ವಿಚಾರದಲ್ಲಿ ಕ್ರೆಡಿಟ್‌ ವಾರ್‌  ಜೋರಾಗಿದ್ದು,  ಈನಡುವೆ ಇಂದಿನ ಹೆದ್ದಾರಿ ಪರಿಶೀಲನೆ ಕಾರ್ಯಕ್ರಮವನ್ನ ಮಾಜಿ ಸಿಎಂ ಸಿದ‍್ಧರಾಮಯ್ಯ   ರದ್ದುಗೊಳಿಸಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಇಂದು  ಪರಿಶೀಲನೆ ಮಾಡುವುದಾಗಿ ಇತ್ತೀಚೆಗೆ ಸಿದ್ಧರಾಮಯ್ಯ ಹೇಳಿದ್ದರು. ನಿನ್ನೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಹ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ಧರಾಮಯ್ಯ ಹೆದ್ದಾರಿ ಪರಿಶೀಲನೆ ನಡೆಸುತ್ತಾರೆಂದು ಮಾಹಿತಿ ನೀಡಿದ್ದರು.

ಆದರೆ ಇದೀಗ ಕೊನೇ ಗಳಿಗೆಯಲ್ಲಿ ಹೆದ್ದಾರಿ ಪರಿಶೀಲನೆ ಕಾರ್ಯಕ್ರಮವನ್ನು ಸಿದ್ಧರಾಮಯ್ಯ ರದ್ದುಗೊಳಿಸಿದ್ದಾರೆ.  ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳುಹಿಸುವುದಕ್ಕೆ ನಿನ್ನೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿತ್ತು. ಇದೀಗ ಇಂದು ಸಹ ಸ್ಕ್ರೀನಿಂಗ್ ಕಮಿಟಿ ಸಭೆ ಮುಂದುವರೆದಿದ್ದು,, ಸಭೆಯಲ್ಲಿ ಸಿದ‍್ಧರಾಮಯ್ಯ ಪಾಲ್ಗೊಳ್ಳುತ್ತಿರುವ ಹಿನ್ನೆಲೆ ಹೆದ್ಧಾರಿ ವೀಕ್ಷಣೆ ಕಾರ್ಯಕ್ರಮವನ್ನ ರದ್ಧುಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Former CM –Siddaramaiah- cancels -Mysore-Bangalore –road-inspection