ಗೆದ್ದೆತ್ತಿನ ಬಾಲ ಹಿಡಿಯುವವರು ಎಂದು ಟೀಕಿಸಿದ್ಧ ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ಬಾಗಲಕೋಟೆ,ಜನವರಿ,24,2023(www.justkannada.in): ಜೆಡಿಎಸ್ ನವರು ಗೆದ್ದೆತ್ತಿನ ಬಾಲ ಹಿಡಿಯುವವರು ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಹೆಚ್ ಡಿಕೆ ಸಿಎಂ ಆಗಿದ್ದಾಗ ಯಾಕೆ ಪಂಚರತ್ನ ಯೋಜನೆ ಜಾರಿ ಮಾಡಲಿಲ್ಲ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಪಂಚರತ್ನ ಯೋಜನೆ ಜಾರಿ ಮಾಡಲು ಸ್ವತಂತ್ರ ಸರ್ಕಾರ ಬಂದಿರಲಿಲ್ಲ. ಒಮ್ಮೆ ಬಿಜೆಪಿ ಇನ್ನೊಂದು ಬಾರಿ ಕಾಂಗ್ರೆಸ್ ಜತೆ ಸರ್ಕಾರ ರಚಿಸಿದ್ದೆ. ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ  ಎಂದಿದ್ದಾರೆ. ನಾನು ಗೆದ್ದೆತ್ತಿನ ಬಾಲ ಹಿಡಿಯಲಿಲ್ಲ ಎರಡು ರಾಷ್ಟ್ರೀಯ  ಪಕ್ಷಗಳು ಸೋತ ಎತ್ತಿನ ಬಾಲ ಹಿಡಿದು ಹೊರಟರು.  ಅವಕಾಶವಾದಿ ರಾಜಕಾರಣ ಮಾಡಿಲ್ಲ.  ನಾವು ಗೆದ್ದ ಎತ್ತಿನ ಬಾಲ ಹಿಡಿದು ಹೋಗಿಲ್ಲ ಎಂದರು.

2006ರಲ್ಲಿ ಬಿಜೆಪಿಯವರೇ ಸರ್ಕಾರ ಮಾಡೋಣ ಅಂದ್ರು   ಆಗಲೂ ಸಹ ಎಂಪಿ ಪ್ರಕಾಶ್ ಗೆ ಸಿಎಂ ಆಗಿ ಎಂದಿದ್ದೆ ಅವರ ಅಗಲ್ಲ ಎಂದಿದ್ದಕ್ಕೆ ನಾನು ಸಿಎಂ ಆದೆ. ಆಗ ಗ್ರಾಮವಾಸ್ತವ್ಯ ಜಾರಿ ಮಾಡಿದ್ದೆ ಎಂದು ಹೆಚ್,ಡಿ ಕುಮಾರಸ್ವಾಮಿ ಹೇಳಿದರು.

Key words: Former CM -HD Kumaraswamy -Siddaramaiah – critisize