ತಾಲ್ಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಹಲ್ಲೆ ಮಾಡಿ ವ್ಯಕ್ತಿ ಹತ್ಯೆಗೆ ಯತ್ನ.

ಮಂಡ್ಯ,ಜನವರಿ,24,2023(www.justkannada.in): ತಾಲ್ಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಹಲ್ಲೆ ಮಾಡಿ ವ್ಯಕ್ತಿಯೊಬ್ಬರನ್ನ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮದ‍್ಧೂರಿನಲ್ಲಿ ನಡೆದಿದೆ.

ಮದ್ಧೂರು ತಾಲ್ಲೂಕು ಕಚೇರಿಯಲ್ಲಿ ಈ ಘಟನೆ ನಡೆದಿದೆ.  ಚೆನ್ನರಾಜ್ ಹಲ್ಲೆಗೊಳಗಾದ ವ್ಯಕ್ತಿ. ನಂದನ್ ಎಂಬಾತನೇ ಹಲ್ಲೆ ನಡೆಸಿರುವುದು. ಚೆನ್ನರಾಜ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಮೀನು ವ್ಯಾಜ್ಯ ಹಿನ್ನೆಲೆ ಚೆನ್ನರಾಜ್ ಮತ್ತು ನಂದನ್ ತಾಲ್ಲೂಕು ಕಚೇರಿ ಬಂದಿದ್ದರು.  ಈ ನಡುವೆ ಚೆನ್ನರಾಜ್ ಪರ ತೀರ್ಪು ಬರುತ್ತಿದ್ದಂತೆ ಕುಪಿತಗೊಂಡಿದ್ದ ನಂದನ್  ಹಲ್ಲೆ ನಡೆಸಿದ್ದಾನೆ. ಚೆನ್ನರಾಜ್ ಗೆ ಖಾರದ ಪುಡಿ ಎರಚಿ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

Key words:  attempt –murder-person -attacking -taluk office