ಅಮಾನತಾದ ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಕುರಿತು ತನಿಖೆಗೆ ಮಾಜಿ ಸಿಎಂ ಹೆಚ್.ಡಿಕೆ ಆಗ್ರಹ.

Promotion

ಬೆಂಗಳೂರು,ಅಕ್ಟೋಬರ್,28,2022(www.justkannada.in):  ಅಮಾನತುಗೊಂಡ ಇನ್ಸ್ ಪೆಕ್ಟರ್ ನಂದೀಶ್  ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಒಬ್ಬ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮಾನಸಿಕ ಒತ್ತಡದಿಂದ  ಇನ್ಸ್ ಪೆಕ್ಟರ್ ನಂದೀಶ್ ಸಾವನ್ನಪ್ಪಿದ್ದಾರೆ . ನಂದೀಶ್  ಅವರಿಗೆ ಒತ್ತಡ ಇತ್ತು ಎಂದು ಅವರ ಪತ್ನಿ ಹೇಳಿದ್ದಾರೆ.  ರಾತ್ರಿ 12 ರಿಂದ 1 ಗಂಟೆ ತನಕ ಬಾರ್ ಓಪನ್ ಮಾಡಲು ಅವಕಾಶ ಕೊಟ್ಟಿರುವ ಆರೋಪದ ಮೇಲೆ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಆ ಪಬ್ ನಲ್ಲಿ  ಅವತ್ತು ಯಾರಿದ್ದರು. ಶಾಸಕರ ಬೆಂಬಲಿಗರು ಯಾರು ಇದ್ದರು. ..?  ಅದೊಂದೇ ಪಬ್ ಮಾತ್ರನಾ ತೆಗೆದಿದ್ದು..? ಅನಧಿಕೃತವಾಗಿ ಪಬ್, ಕ್ಯಾಸಿನೋ ನಡೆಯುತ್ತಿಲ್ವಾ..? ರಾತ್ರಿ 1 ಗಂಟೆಗೆ ತನಕ ಸರ್ಕಾರವೇ ರೆಸ್ಟೋರೆಂಟ್ ತೆಗೆಯಲು ಅವಕಾಶ ಕೊಡುತ್ತಿದೆ. ಅಲ್ಲಿ ಯಾರು ಪಾರ್ಟಿ ಮಾಡಿದ್ದರು ಎಂದು ಗೊತ್ತಾಗಬೇಕು ಎಂದು ಆಗ್ರಹಿಸಿದರು.

ನಂತರ ನಂದೀಶ್, ಸಸ್ಪೆಂಡ್ ರಿವೋಕ್ ಗೆ ದೊಡ್ಡವರ ಬಳಿ ಹೋಗಿದ್ರು ಅನ್ನೋ ಮಾಹಿತಿ ಇದೆ.  ಆ ವೇಳೇ ಅವರು ಮರುನೇಮಕ ಸಾಧ್ಯವಿಲ್ಲ ಎಂದಿದ್ದರು. ಬೇರೆ ಹುದ್ದೆ ಕೊಡುವುದಾಗಿ ಹೇಳಿದ್ರು ಎಂಬ ಮಾಹಿತಿ ತಿಳಿದು ಬಂದಿದೆ.  ಆ ಮಾತಿನಿಂದ ನೊಂದು ಸಾವನ್ನಪ್ಪಿದ್ದಾರೆ. ಮಾನಸಿಕವಾಗಿ ನೊಂದು ಅವರಿಗೆ ಹೃದಯಾಘಾತವಾಗಿದೆ.

ಪೊಲೀಸ್ ಅಧಿಕಾರಿ ನಂದೀಶ್ ತಪ್ಪು ಮಾಡಿದ್ದರೆ ತನಿಖೆ ಮಾಡಬೇಕು. ನಾನು ರಸ್ತೆಯಲ್ಲಿ ಹೋಗುವಾಗ ರಾತ್ರಿ ತನಕ ರೆಸ್ಟೋರೆಂಟ್ ನಡೆಸುತ್ತಿರುವುದನ್ನು ನೋಡಿದ್ದೇನೆ. ನೀವೇ ಎಣ್ಣೆ ಕುಡಿಯಿರಿ ಎಂದು ಪ್ರೋತ್ಸಾಹ ಕೊಟ್ಟು ಬಾರ್ ​ನಿಂದ ಹೊರಗಡೆ ಬಂದ ತಕ್ಷಣ ದಂಡ ಹಾಕುತ್ತೀರಾ. ನಿನ್ನೆ ಹೃದಯಾಘಾತದಿಂದ ಆಗಿರುವುದು ಸಾವು ಅಲ್ಲ, ಸರ್ಕಾರದ ನಡತೆಯಿಂದ ಆಗಿರುವ ಕೊಲೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಿಬೇಕು  ಎಂದು ಹೆಚ್.ಡಿಕೆ ಆಗ್ರಹಿಸಿದರು.

Key words: Former CM-HD Kumaraswamy- investigation – death – suspended -inspector