ಮೀಸಲಾತಿ ಹೆಚ್ಚಳ ವಿಚಾರ: ಕಾಂಗ್ರೆಸ್ ಗೆ ಎಸ್.ಸಿ ಮತ್ತು ಎಸ್ ಟಿ ಸಮುದಾಯ ಪಾಠ ಕಲಿಸುತ್ತೆ- ಸಚಿವ ಶ್ರೀರಾಮುಲು.

ತುಮಕೂರು,ಅಕ್ಟೋಬರ್,28,2022(www.justkannada.in):  ನಮ್ಮ ಸರ್ಕಾರ ಎಸ್.ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳ  ಮಾಡಿದ್ದೇವೆ. ಕಾಂಗ್ರೆಸ್ ಗೆ ಎಸ್.ಸಿ ಮತ್ತು ಎಸ್ ಟಿ ಸಮುದಾಯ ಪಾಠ ಕಲಿಸುತ್ತವೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ತುಮಕೂರಿನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಿಸಿದ್ದೇವೆ. ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತದೆ.  ಸಿಎಂ ಮತ್ತು  ಪ್ರಧಾನಿಗೆ ಅಭಿನಂದಾನ ಕಾರ್ಯಕ್ರಮ ಮಾಡುತ್ತೇವೆ. ಕೊಟ್ಟ ಮಾತಿಗೆ ಬದ‍್ಧನಾಗಿದ್ದೇನೆ.  ಬಿಜೆಪಿ ವಾಲ್ಮೀಕಿ ಸಮುದಾಯ ಪರವಾಗಿದೆ ಎಂದರು.

ರಾಹುಲ್ ನಾಟಕೀಯವಾದ ಪಾದಯಾತ್ರೆ ಮಾಡಿದರು. ಹಿಂದುಳಿದವರ ಸಮುದಾಯಕ್ಕೆ ಅನ್ಯಾಯ ಮಾಡಿದರು. ತಾಕತ್ತಿದ್ದರೇ ಮೀಸಲಾತಿ ಕೊಡಬೇಕಿತ್ತು  ಆಗ ಮೀಸಲಾತಿ ಕೊಡುವ ಧೈರ್ಯ ಮಾಡಲಿಲ್ಲ. ಕಾಂಗ್ರೆಸ್ ಗೆ ಎಸ್.ಸಿ ಮತ್ತು ಎಸ್.ಟಿ ಸಮುದಾಯ ಪಠ ಕಲಿಸುತ್ತದೆ. ಬೇರೆ ಪಕ್ಷದ ವಾಲ್ಮೀಕಿ ನಾಯಕರು ಬಿಜೆಪಿಗೆ ಬರಬೇಕು ಎಂದರು.

Key words: increase – reservation-  SC – ST- community – Congress –Minister- Sriramulu.