ಮೊದಲು ನೆರೆ ಸಂತ್ರಸ್ಥರ ಬಗ್ಗೆ ಗಮನಹರಿಸಿ; ಆನಂತರ ಫೋನ್ ಟ್ಯಾಪಿಂಗ್, ಅಕ್ರಮಗಳ ಬಗ್ಗೆ ಮಾತನಾಡಿ-ಬಿಜೆಪಿ ನಾಯಕರಿಗೆ ಎಂ.ಬಿ ಪಾಟೀಲ್ ಟಾಂಗ್…..

Promotion

ಬೆಂಗಳೂರು,ಸೆ,16,2019(www.justkannada.in): ಮೊದಲು ನೆರೆ ಸಂತ್ರಸ್ಥರ ಬಗ್ಗೆ ಗಮನಹರಿಸಿ.  ಆ ಮೇಲೆ ಆ ಟ್ಯಾಪಿಂಗ್ ಈ ಅಕ್ರಮ. ಅನ್ನೋದನ್ನ ಮಾತನಾಡಿ ಎಂದು ಬಿಜೆಪಿ ಸರ್ಕಾರಕ್ಕೆ ಮಾಜಿ ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟರು.

ಮಾಧ್ಯಮಗಳ ಜತೆ ಇಂದು ಮಾತನಾಡಿ ಹಿಂದಿನ‌ ನೀರಾವರಿ ಯೋಜನೆಗಳನ್ನ ತನಿಖೆಗೆ ವಹಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಎಂ.ಬಿ ಪಾಟೀಲ್ , ಯಾವುದೇ ಯೋಜನೆ ಏಕಾಏಕಿ ಬರುವುದಿಲ್ಲ. ಇದರ ಬಗ್ಗೆ ಇನ್ನೂ ‌ಗಮನಕ್ಕೆ ಬಂದಿಲ್ಲ. ಎಲ್ಲವನ್ನ ತಿಳಿದ ಮೇಲೆ ರಿಯಾಕ್ಟ್ ಮಾಡಬೇಕು. ತಿಳಿದುಕೊಂಡು ಎಲ್ಲವನ್ನೂ ನಾನು ಹೇಳ್ತೇನೆ. ಯೋಜನೆ ಜಾರಿ ಯಾಗಬೇಕಾದರೆ ಸಬ್ ಕಮಿಟಿ ಇರುತ್ತದೆ. ಸಬ್ ಕಮಿಟಿಯಿಂದ ಸಿಎಂ ನೇತೃತ್ವದ ಬೋರ್ಡ್ ಗೆ ಬರುತ್ತದೆ. ಅಲ್ಲಿ ಡಿಸೈಡ್ ಆದ ಮೇಲೆ ಯೋಜನೆ ಬರುತ್ತದೆ. ಈ ಎಲ್ಲಾ ಪ್ರೊಸೆಸ್ ಮುಗಿದ ಮೇಲೆಯೇ ಚಾಲನೆ ಸಿಗಲಿದೆ. ಹೀಗಾಗಿ ಅಕ್ರಮಕ್ಕೆ ಅವಕಾಶ ಸಿಗೋದು ಕಷ್ಟ. ನನ್ನ ಅವಧಿಯ ಬಗ್ಗೆ ಎಲ್ಲೂ ಹೇಳಿದಂತೆ ಕಾಣ್ತಿಲ್ಲ. ನಮ್ಮ ಅವಧಿಯಲ್ಲಿ ಎಲ್ಲವನ್ನೂ ಸರಿಯಾಗಿಯೇ ಮಾಡಿದ್ದೇನೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಮೊದಲು ನೆರೆ ಸಂತ್ರಸ್ಥರ ಬಗ್ಗೆ ಗಮನಹರಿಸಿ…

ಉತ್ತರ ಕರ್ನಾಟಕ ಪ್ರವಾಹದ ಬಗ್ಗೆ ಯಾರೂ ಮಾತನಾಡ್ತಿಲ್ಲ. ಊಟಕ್ಕಿಲ್ಲದೆ ಜನ ಪರದಾಡ್ತಿದ್ದಾರೆ. ಮತ್ತಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನ ಬೀದಿಗೆ ಬಿದ್ದು ನಲುಗುತ್ತಿದ್ದಾರೆ ತಾತ್ಕಾಲಿಕ ಶೆಡ್ ಹಾಕಿಕೊಟ್ಟಿಲ್ಲ. ದವಸ ಧಾನ್ಯ  ಹೊದಿಯೋ ಬೆಟ್ ಶೀಟ್ ಸಹ ಇಲ್ಲ. ಆದರೆ ಸರ್ಕಾರ ಇ ಬಗ್ಗೆ ಗಮನ ಹರಿಸುತ್ತಲೇ ಇಲ್ಲ. ೀ ಸರ್ಕಾರ ಗೊತ್ತು ಗುರಿ ಇಲ್ಲದೆ ನಡೆಯುತ್ತಿದೆ.  ಅತ್ಯಂತ ಕೆಟ್ಟ ಸರ್ಕಾರ ಇದಾಗಿದೆ. ನಾನಾಗಿದ್ದರೆ ಯಾವುದೇ ಕೆಲಸಕ್ಕೆ ಅವಕಾಶ ಕೊಡ್ತಿರಲಿಲ್ಲ.ಮೊದಲು ನೆರೆ ಸಂತ್ರಸ್ಥರ ಪರವಾಗಿ ನಿಲ್ಲುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವಪಕ್ಷ ನಿಯೋಗ ಬೇಡ ಅಂತ ಸವದಿ ಹೇಳ್ತಾರೆ. ಮಾಧುಸ್ವಾಮಿ 11 ಕೋಟಿ ಪರಿಹಾರ ದೊಡ್ಡದು ಅಂತಾರೆ. ಕೆ.ಎಸ್ ಈಶ್ವರಪ್ಪ 10 ಸಾವಿರವೇ ದೊಡ್ಡದು ಅಂತಾರೆ. ಇದೆಲ್ಲವೂ ಸಚಿವರು ಹೇಳೋ ಮಾತೇ. ಮೊದಲು ನೆರೆ ಸಂತ್ರಸ್ಥರ ಬಗ್ಗೆ ಗಮನಹರಿಸಿ . ಆ ಮೇಲೆ ಆ ಟ್ಯಾಪಿಂಗ್ ಈ ಅಕ್ರಮ. ಅನ್ನೋದನ್ನ ಮಾತನಾಡಿ ಎಂದು ಸಚಿವರಿ  ಮಾಜಿ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದರು.

ಸಂತ್ರಸ್ಥರನ್ನ ಒಂದು ಪಕ್ಷಕ್ಕೆ ಗುರ್ತಿಸುವುದು ತಪ್ಪು. ಸಂತ್ರಸ್ಥರಿಗೆ ಯಾವುದೇ ಪಾರ್ಟಿ ಪಕ್ಷ ಎಂಬುದಿಲ್ಲ. ರಾಜಕೀಯ ಬಿಟ್ಟು ಮೊದಲು ಸಂತ್ರತ್ರದ ಪರಿಹಾರಕ್ಕೆ ಮುಂದಾಗಿದೆ. ಆ ತನಿಖೆ ಈ ತನಿಖೆ ಅನ್ನೋದನ್ನ ಬಿಡಿ. ಅದಕ್ಕೂ ಮೊದಲು ಜನ ನಿಮ್ಮನ್ನೇ ತೆಗಿತಾರೆ ಸರ್ಕಾರ ಪತನವಾಗಲಿದೆ ಎಂದು ಎಂ.ಬಿ ಪಾಟೀಲ್  ಭವಿಷ್ಯ ನುಡಿದರು.

ಸರ್ಕಾರದಲ್ಲಿ ವರ್ಗಾವಣೆ ದಂಧೆ ಮುಂದುವರಿದಿದೆ. ಬೇಕಾಬಿಟ್ಟಿಯಾಗಿ ವರ್ಗಾವಣೆ ನಡೆಯುತ್ತಿದ್ದು ಮಧ್ಯಾಂತರ ಚುನಾವಣೆ ಯಾವಾಗಬೇಕಾದರೂ ಬರಬಹುದು ಎಂದು ಕಿಡಿಕಾರಿದ ಎಂ.ಬಿ ಪಾಟೀಲ್,  ಒಂದು ಸಮುದಾಯದಿಂದ ಬೆಳೆಯೋಕೆ ಆಗಲ್ಲ ಹುಟ್ಟಿದ್ದು ಸಮುದಾಯ ಇರಬಹುದು. ಆದರೆ ಎಲ್ಲರನ್ನೂ ಜೊತೆಗೆ ಕೊಂಡಯ್ದಾಗ ಮಾತ್ರ ನಾಯಕ. ಲಿಂಗಾಯತ ಸಮುದಾಯದ ನಾಯಕನಾಗ್ತೇನೆ ಅನ್ನೋ ವಿರೋಧವೇಕೆ..? ಎಂದು ಪ್ರಶ್ನಿಸಿದರು.

ಭಯದಿಂದಾಗಿ ಬೆಳಗಾವಿಯಲ್ಲಿ ಅಧಿವೇಶನಕ್ಕೆ ಮುಂದಾಗುತ್ತಿಲ್ಲ….

ಬೆಳಗಾವಿ ಅಧಿವೇಶ ನಡೆಸೋಕೆ ಹಿಂದೇಟು ಹಾಕುವ  ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ಸರ್ಕಾರದವರು ಹೆದರಿಕೊಂಡು ಅಲ್ಲಿ ಅಧಿವೇಶನ ನಡೆಸುತ್ತಿಲ್ಲವೆನ್ನಿಸುತ್ತಿದೆ. ಯಾಕಂದ್ರೆ ನೆರೆ ಸಂತ್ರಸ್ಥರ ಅಹವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಭಯದಿಂದ ನಡೆಸೋಕೆ ಹಿಂದೇಟು ಹಾಕ್ತಿರಬಹುದು. ಬೆಳಗಾವಿ ಅಧಿವೇಶನ ಹಿಂದೇಟಿಗೆ ಭಯವೇ ಕಾರಣ ಎಂದು ಸರ್ಕಾರವನ್ನ ಲೇವಡಿ ಮಾಡಿದರು.

ಪ್ರತ್ಯೇಕ ಲಿಂಗಾಯತ ಧರ್ಮ ನಮ್ಮ‌ಅಸ್ಮಿತೆ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ಮೊದಲು ನೆರೆ ಸಂತ್ರಸ್ಥರ ಬಗ್ಗೆ ಮಾತನಾಡೋಣ. ಇನ್ನೂ ಸಾಕಷ್ಟು ಸಮಯವಿದೆ. ಮುಂದೆ ನೋಡೋಣ ಅದರ ಬಗ್ಗೆ ಯೋಚಿಸೋಣ ಎಂದು ಎಂಬಿ ಪಾಟೀಲ್ ತಿಳಿಸಿದರು.

Key words: Focus –floodsv ictims –first-former minister-MB Patil