ದೂರ ಶಿಕ್ಷಣ ಆರಂಭಿಸಲು ಪ್ರತ್ಯೇಕ ಮಂಡಳಿ ರಚಿನೆಗೆ ಮುಂದಾದ ಮೈಸೂರು ವಿವಿ.

 

ಮೈಸೂರು, ಸೆ.16, 2019 : (www.justkannada.in news) ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದೂರ ಶಿಕ್ಷಣ ಆರಂಭಿಸಲು ಪ್ರತ್ಯೇಕ ಮಂಡಳಿ ರಚಿನೆಗೆ ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.
ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಶೈಕ್ಷಣಿಕ ಮಂಡಳಿ ಸಭೆ ನಡೆಸಲಾಯಿತು. ಈ ಸಭೆಯ ಒಟ್ಟಾರೆ ಸಾರಂಶ….

ಇಗ್ನೋ ವಿಶ್ವವಿದ್ಯಾನಿಲಯದ ನಿಯಮದ ಅನ್ವಯ ದೂರ ಶಿಕ್ಷಣ ಆರಂಭಿಸುವ ವಿವಿಗಳು ಪ್ರತ್ಯೇಕ ಶಿಕ್ಷಣ ಮಂಡಳಿ ರಚಿಸಬೇಕು ಎಂದು ಯುಜಿಸಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಶಿಕ್ಷಣ ಮಂಡಳಿ ಸಭೆಯು ಪ್ರತ್ಯೇಕ ಮಂಡಳಿ ರಚಿಸಲು ತೀರ್ಮಾನಿಸಿತು.
ಅಂತೆಯೇ ಐಒಯು ಪ್ಯಾರಾಮೀಟರ್ ಅನ್ವಯ ನಿರೀಕ್ಷಿತ ಪ್ರಮಾಣದಲ್ಲಿ ಪ್ರಬಂಧ ಮಂಡನೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನ ಭವನಕ್ಕೆ 20 ಮಂದಿ ಸಂಶೋ`ನಾರ್ಥಿಗಳನ್ನು 12 ಸಾವಿರ ಫೆಲೋಶಿಪ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಮ್ಮತಿಸಿತು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಲವು ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ. ಹಾಲಿ ಸಂಶೋಧನಾ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಜೊತೆಯೇ ಇದ್ದಾರೆ. ಆದ್ದರಿಂದ ಅವರಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲು ಸಭೆ ಸಮ್ಮತಿಸಿತು. ಬಯೋ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಮತ್ತು ಕನ್ನಡ ವಿಭಾಗಕ್ಕೆ ಹೆಚ್ಚಿನ ಕೊಠಡಿಗಳ ನಿರ್ಮಾಣಕ್ಕೂ ಸಭೆ ಸಮ್ಮತಿಸಿತು.
ಮಾಲಿಕ್ಯೂಲರ್ ಬಯಾಲಜಿ ವಿಭಾಗದ ಬಳಿ ಈ ಹಿಂದೆ ನಿರ್ಮಿಸಲಾದ ವಸ್ತು ಪ್ರದರ್ಶನ ಕಟ್ಟಡವನ್ನು ಮೂರ್ನಾಲ್ಕು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ತಿಳಿಸಿದರು. ಮೈಸೂರು ವಿವಿಯ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ನಿರ್ಮಿಸಲಾದ ಈ ವಸ್ತು ಪ್ರದರ್ಶನವನ್ನು ಈಗ ಆರಂಭಿಸಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಕಾರ್ಯರಂಭ ಆಗುವಂತೆ ನೋಡಿಕೊಳ್ಳಲಾಗುವುದು.
ಮೈಸೂರು ವಿವಿ ಆರಂಭದಿಂದ ಈವರೆಗಿನ ಎಲ್ಲಾ ಹಂತದ ಮಾಹಿತಿಯನ್ನು ಈ ವಸ್ತುಪ್ರದರ್ಶನ ಒಳಗೊಂಡಿರುತ್ತದೆ ಎಂದರು.

ಆಕ್ಷೇಪ :
ಶಿಕ್ಷಣ ಮಂಡಳಿ ಸದಸ್ಯ ನಾಗೇಂದ್ರಪ್ಪ ರಾಸಾಯನಶಾಸ್ತ್ರ ವಿಭಾಗದಲ್ಲಿ 2018-19ನೇ ಸಾಲಿನಲ್ಲಿ ಜೀವಮಾನ ಪ್ರಾಧ್ಯಾಪಕ ಹುದ್ದೆ ನೀಡಿ ವಿವಿಯಿಂದ ಸವಲತ್ತು ನೀಡುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಸುಧೀರ್ಘ ಚರ್ಚೆಯ ಬಳಿಕ ಈ ವಿಷಯ ಈಗ ಅಪ್ರಸ್ತುತ ಎಂದು ಸಭೆ ತಿಳಿಸಿತು.
ಸಭೆಯಲ್ಲಿ ಕುಲಸಚಿವರಾದ ಪ್ರೊ.ಆರ್. ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ. ಮಹದೇವನ್, ಹಣಕಾಸು ಅಧಿಕಾರಿ ಟಿ.ಎಸ್. ದೇವರಾಜ ಇದ್ದರು.

—–

key words : mysore-university-academic-council-meeting-vc-hemanth.kumar