Promotion
ಬೆಂಗಳೂರು, ಮೇ 31, 2021 (www.justkannada.in): ಹಾಲಿವುಡ್ ನಟ ಜೋ ಲಾರಾ ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ.
ಈ ವಿಮಾನದಲ್ಲಿ ಜೋ ಲಾರಾ ಮತ್ತು ಅವರ ಪತ್ನಿ ಸೇರಿ ಒಟ್ಟು 7 ಮಂದಿ ಪ್ರಯಾಣ ಮಾಡುತ್ತಿದ್ದರು. ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಖಾಸಗಿ ಜೆಟ್ ಪತನವಾಗಿದೆ ಎಂದು ವರದಿ ಆಗಿದೆ.
ಅಪಘಾತಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಜೋ ಲಾರಾ ಮತ್ತು ಅವರ ಪತ್ನಿ ಜೊತೆ ಪ್ರಯಾಣಿಸುತ್ತಿದ್ದ ಇನ್ನುಳಿದವರೆಲ್ಲ ಸ್ಥಳೀಯರು ಎಂದು ಹೇಳಲಾಗಿದೆ.
ಜೋ ಲಾರಾ ಪತ್ನಿ ವೃತ್ತಿಪರ ಡಯಟೀಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.