ಸ್ವಲ್ಪ. ಸ್ವಲ್ಪ ಕನ್ನಡ ಬರುತ್ತೆ ಎಂದ ಕೊಹ್ಲಿ: ಅಭಿಮಾನಿಗಳು ಫುಲ್ ಖುಷ್!

ಬೆಂಗಳೂರು, ಮೇ 31, 2021 (www.justkannada.in): ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ವೇಳೆ ಅಭಿಮಾನಿ ಕೊಹ್ಲಿಗೆ ನಿಮಗೆ ಕನ್ನಡ ಮಾತನಾಡಲು ಬರುತ್ತಾ? ಕನ್ನಡ ಅರ್ಥವಾಗುತ್ತಾ? ಎಂದು ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ಕೊಯ್ಲಿ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದು ಉತ್ತರಿಸಿದ್ದಾರೆ. ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಕನ್ನಡ ಅರ್ಥಮಾಡಿಕೊಳ್ಳೋಕೆ ಮಾತ್ರ ಬಹಳ ಕಷ್ಟವಾಗುತ್ತೆ. ಅರ್ಥವೇ ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಪ್ರಶ್ನೋತ್ತರ ವಿಚಾರ ಸದ್ದು ಮಾಡುತ್ತಿದೆ.

ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದು ಉತ್ತರಿಸಿದ್ದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿ ಎಲ್ಲೆಡೆ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ.