ಏಷ್ಯನ್ ಬಾಕ್ಸಿಂಗ್ ಚಾಂಪಿಯನ್’ ಶಿಪ್ ನಲ್ಲಿ ಚಿನ್ನ ಗೆದ್ದ ಪೂಜಾ ರಾಣಿ, ಬೆಳ್ಳಿಗೆ ತೃಪ್ತಿಪಟ್ಟ ಮೇರಿ ಕೋಮ್

ಬೆಂಗಳೂರು, ಮೇ 31, 2021 (www.justkannada.in): ಪೂಜಾ ರಾಣಿ ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ ಶಿಪ್‌ ನಲ್ಲಿ ಚಿನ್ನ ಗೆದ್ದಿದ್ದಾರೆ.

ಈ ನಡುವೆ ಆರನೇ ಚಿನ್ನದ ಭರವಸೆ ಮೂಡಿಸಿದ್ದ ಮೇರಿ ಕೋಮ್‌ ಮತ್ತು ಲಾಲ್‌ಬೌತ್ಸಾಹಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಫೈನಲ್‌ ಹಣಾಹಣಿಯಲ್ಲಿ ಭಾರತ ಎರಡು ರಜತ ಗೆದ್ದ ಬಳಿಕ ಪೂಜಾ ರಾಣಿ ಬಂಗಾರದ ಖಾತೆ ತೆರೆದರು. ಅವರು ಮೊವ್ಲೊನೋವಾ ವಿರುದ್ಧ ಜಯ ಸಾಧಿಸಿದರು.

51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮೇರಿ ಕೋಮ್‌ ದಿಟ್ಟ ಹೋರಾಟ ನೀಡಿದ ಅವರನ್ನು ಕಜಾಕ್‌ಸ್ಥಾನದ ನಾಜಿಮ್‌ ಕೈಝಬೆ 3-2 ಅಂತರದಿಂದ ಮಣಿಸಿದರು. 11 ವರ್ಷ ಕಿರಿಯಳ ವಿರುದ್ಧ 6 ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಸೋಲು ಕಾಣಬೇಕಾಯಿತು.