ಮೊದಲ ಏಕದಿನ ಪಂದ್ಯ: ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿದ ಶುಬ್ಮನ್ ಗಿಲ್.

Promotion

ಹೈದರಾಬಾದ್,ಜನವರಿ,18,2023(www.justkannada.in):  ಟೀಂ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟ್ಸ್​ಮನ್ ಶುಭಮನ್ ಗಿಲ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸುತ್ತಿದ್ದು ಇಂದು ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ  3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದ ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದ್ದು, ಯುವ ಆಟಗಾರ ಗಿಲ್ ದ್ವಿಶತಕ ಸಿಡಿಸಿದ್ದಾರೆ. 149 ಬಾಲ್ ಗಳಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್ ಮೂಲಕ 208 ರನ್ ಬಾರಿಸಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು.

ಇತ್ತೀಚೆಗಷ್ಟೆ ಬಾಂಗ್ಲಾದೇಶದ ವಿರುದ್ಧ ಮತ್ತೊಬ್ಬ ಯವ ಬ್ಯಾಟ್ಸಮನ್ ಇಶಾನ್ ಕಿಶಾನ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದಕ್ಕೂ ಮುನ್ನ ಭಾರತೀಯ ಆಟಗಾರರಾದ ಸಚಿನ್ ತೆಂಡೂಲ್ಕರ್ ವಿರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ದ್ವಿಶತಕ ಸಿಡಿಸಿದ್ದಾರೆ.

ಪ್ರಸ್ತುತ ಭಾರತ 50 ಓವರ್ ಗಳಲ್ಲಿ 349 ರನ್ ಗಳಿಸಿದ್ದು ನ್ಯೂಜಿಲ್ಯಾಂಡ್ ಗೆಲ್ಲಲು 350 ರನ್ ಕಲೆಹಾಕಬೇಕಿದೆ.

Key words: First ODI-Shubman Gill – double century –against- New Zealand.