17 ಶಾಸಕರಿಗೆ ಹೇಳಿದ ಮಾತು ಅವರ ನಾಯಕರಿಗೂ ಅನ್ವಯವಾಗುವುದಿಲ್ಲವೇ..? ಬಿಕೆ ಹರಿಪ್ರಸಾದ್ ಗೆ ಸಿಎಂ ಬೊಮ್ಮಾಯಿ ಟಾಂಗ್.

ಚಿಕ್ಕಮಗಳೂರು,ಜನವರಿ ,18,2023(www.justkannada.in):  ವೇಶ್ಯಯರ ರೀತಿ ಕೆಲವರು ತಮ್ಮ ಶಾಸಕಸ್ಥಾನವನ್ನ ಮಾರಿಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.

ಈ ಕುರಿತು ಚಿಕ್ಕಮಗಳೂರಿನ ಬಿರೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಕೆ ಹರಿಪ್ರಸಾದ್ ಯಾಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಬಿಕೆ ಹರಿಪ್ರಸಾದ್ ಸ್ವಲ್ಪ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ 2007ರಲ್ಲಿ ಅವರ ನಾಯಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದರು.  ಈ 17 ಶಾಸಕರಿಗೆ ಹೇಳಿದ ಮಾತು ಅವರಿಗೂ ಅನ್ವಯವಾಗುವುದಿಲ್ಲವೇ..?ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.

ಉಚಿತ ವಿದ್ಯುತ್ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಯಾಕೆ ಜಾರಿ ಮಾಡಲಿಲ್ಲ ಕೊಟ್ಟ ಭರವಸೆಗಳನ್ನೇ ಈಡೇರಿಸಿಲ್ಲ.  ನಾವು ನುಡಿದಂತೆ ನಡೆದುಕೊಂಡಿದ್ದೇವೆ . ನಾವು ಘೋಷಣೆ ಮಾಡಿದ್ದೆ ಅದನ್ನೇ ಕಾಂಗ್ರೆಸ್ ನವರು ಹೇಳಿದ್ದಾರೆ ಎಂದರು.

Key words: 17 MLAs –BK Hariprasad-statement-CM Bommai- Tong